ಬೋರ್‌ವೆಲ್‍ಗೆ ಬಿದ್ದಿದ್ದ 8 ವರ್ಷದ ಬಾಲಕ ಸಾವು…

63
firstsuddi

ಭೋಪಾಲ್ : ಬೋರ್‌ವೆಲ್‍ಗೆ ಬಿದ್ದಿದ್ದ 8 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.

ತನ್ಮಯ್ ಸಾಹು (8) ಮೃತ ಬಾಲಕ. ನಾನಕ್ ಎಂಬವರ ಜಮೀನಿನಲ್ಲಿ ಡಿಸೆಂಬರ್ 6ರಂದು ಬಾಲಕ ತನ್ಮಯ್ ಆಟವಾಡುತ್ತಿದ್ದ. ಈ ವೇಳೆ ಅಲ್ಲೇ ಇದ್ದ 55 ಅಡಿ ಆಳದ ಕೊಳವೆಬಾವಿಗೆ ತನ್ಮಯ್ ಬಿದ್ದಿದ್ದಾನೆ.

ಕೂಡಲೇ ಬಾಲಕನ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಎಸ್‍ಡಿಆರ್‌ಎಫ್, ಗೃಹರಕ್ಷಕ ದಳ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನುಸತತ 4 ದಿನಗಳಿಂದ ಕೆಲಸದಲ್ಲಿ ನಿಯೋಜಿಸಲಾಗಿತ್ತು. ನಿರಂತರ 80 ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಸಿ ಬಾಲಕನನ್ನು ಬೋರ್​ವೆಲ್​ನಿಂದ ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.