ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ : ಚೀನಾ

50
firstsuddi

ಬೀಜಿಂಗ್ : ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಚೀನಾ ಹೇಳಿದೆ. ಡಿಸೆಂಬರ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಭಾರತೀಯ ಯೋಧರೊಂದಿಗೆ ಘರ್ಷಣೆ ನಡೆದ ಬಳಿಕ ಇದೀಗ ಚೀನಾ ಪ್ರತಿಕ್ರಿಯಿಸಿದೆ.

ಚೀನಾ-ಭಾರತದ ಗಡಿ ಪರಿಸ್ಥಿತಿಯು ಒಟ್ಟಾರೆ ಸ್ಥಿರವಾಗಿದೆ. ಎರಡೂ ಕಡೆಯ ಸಚಿವರು ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಗಡಿ ಸಮಸ್ಯೆಯ ಬಗ್ಗೆ ಅಡೆತಡೆಯಿಲ್ಲದ ಮಾತುಕತೆಯನ್ನು ನಡೆಸಿದ್ದೇವೆ. ಒಟ್ಟಾಗಿ ಚೀನಾ-ಭಾರತದ ಗಡಿ ಪ್ರದೇಶದ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ತವಾಂಗ್ ಸೆಕ್ಟರ್ ನಲ್ಲಿ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಎರಡು ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು.