ಭಾರತ ನನ್ನ ಶಾಶ್ವತ ನಿವಾಸ, ಇಲ್ಲೇ ವಾಸಿಸಲು ಬಯಸುತ್ತೇನೆ : ದಲೈಲಾಮಾ.

74
firstsuddi

ನವದೆಹಲಿ : ಭಾರತ ಉತ್ತಮ ಸ್ಥಳವಾಗಿದ್ದು, ಇದು ನನ್ನ ಶಾಶ್ವತ ನಿವಾಸವಾಗಿದೆ. ನಾನು ಭಾರತದಲ್ಲೇ ವಾಸಿಸಲು ಬಯಸುತ್ತೇನೆ ಎಂದು ಎಂದು ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರಾ ವಿಮಾನ ನಿಲ್ದಾಣದಲ್ಲಿ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ಯುರೋಪ್, ಆಫ್ರಿಕಾ ಮತ್ತು ಏಷ್ಯಾದಲ್ಲಿ ಸಾಮಾನ್ಯವಾಗಿ ವಿಷಯಗಳು ಸುಧಾರಿಸುತ್ತಿವೆ. ಚೀನಾ ಕೂಡ ಹೊಂದಿಕೊಳ್ಳುತ್ತಿದೆ. ಆದರೆ ಚೀನಾಕ್ಕೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಭಾರತಕ್ಕೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.

ಎರಡು ಮೂರು ದಿನಗಳ ಕಾಲ ಆರೋಗ್ಯ ತಪಾಸಣೆ ಹಿನ್ನೆಲೆ ದೆಹಲಿಯಲ್ಲಿ ಧರ್ಮಗುರು ದಲೈಲಾಮಾ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಅವರು ಬಿಹಾರದ ಬೋಧಗ್ಯಾಕ್ಕೆ ತೆರಳಲಿದ್ದಾರೆ.