ಭಾರತ ಮೂಲದ ವಿದ್ಯಾರ್ಥಿನಿಯ ಜೀವಂತ ಸಮಾಧಿ – ಆರೋಪಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಮನವಿ…

58
firstsuddi

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಮಾಜಿ ಪ್ರಿಯಕರ ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿನಿ ಕೌರ್ ಪರ ವಕೀಲ ಮನವಿ ಮಾಡಿದ್ದಾರೆ.

21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜಸ್ಮೀನ್ ಕೌರ್ ಎಂಬ ಯುವತಿಯನ್ನು ಆರೋಪಿ ತಾರಿಕ್‍ಜೋತ್ ಸಿಂಗ್ 2021ರ ಮಾರ್ಚ್‍ನಲ್ಲಿ ಅಪಹರಿಸಿದ್ದ. ಬಳಿಕ ಕೇಬಲ್ ಹಾಗೂ ಗಮ್ ಟೇಪ್ ಬಳಸಿ ಕೈ ಕಾಲುಗಳಿಗೆ ಸುತ್ತಿ ಆಕೆಯನ್ನು ಜೀವಂತವಾಗಿ ಸಮಾಧಿ ಮಾಡಿದ್ದ. ಆತ ಈ ಕೃತ್ಯವನ್ನು ಆಕೆಯ ಮೇಲಿನ ದ್ವೇಷದಿಂದ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಆತನ ವಿಚಾರಣೆ ನಡೆಸಿದ್ದಾಗ ಆರೋಪಿ ಆಕೆಯ ಹತ್ಯೆ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದ. ಬಳಿಕ ಯುವತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು.

ಕೌರ್ ಅವರ ತಾಯಿ ಸೇರಿದಂತೆ ಕೌರ್ ಅವರ ಇಡೀ ಕುಟುಂಬವೇ ಈ ಹಿಂದೆ ತಮ್ಮ ಮಗಳು ತನ್ನ ಕೊನೆ ಕ್ಷಣಗಳಲ್ಲಿ ಹೇಗೆ ಹಿಂಸೆಗೆ ಒಳಗಾದಳು ಎಂಬುದನ್ನು ನೆನೆದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಗಿ ಹೇಳಿಕೊಂಡಿದ್ದರು. ಆಕೆಯನ್ನು ಕೊನೆ ಕ್ಷಣದಲ್ಲಿ ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ, ಆಕೆ ತನ್ನ ಕೊನೆ ಕ್ಷಣಗಳನ್ನು ಈ ಭೂಮಿಯ ಮೇಲೆ ಬಹಳ ಕೆಟ್ಟ ಅಮಾನವೀಯ ರೀತಿಯಲ್ಲಿ ಕಳೆದಳು. ಎಳೆ ವಯಸ್ಸಿನ ನನ್ನ ಮಗಳನ್ನು ಕಳೆದುಕೊಂಡು ನನ್ನ ಹೃದಯ ಒಡೆದು ಹೋಗಿದೆ. ಆತ ಮಾಡಿದ್ದಕ್ಕೆ ಎಂದಿಗೂ ಕ್ಷಮೆ ಇಲ್ಲ ಎಂದು ಯುವತಿಯ ತಾಯಿ ಹೇಳಿದ್ದಾರೆ.