ಚೆನೈ: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಆರಂಭವಾಗಿದೆ. ಚೆನೈ ನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡು ರೋಹಿತ್ ಬಳಗವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದೆ. ಇ ತಂಡಗಳಲ್ಲಿ ಆಡುವ 11ರ ಬಳಗ ಘೋಷಣೆಯಾಗಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಬ್ಬರು ಸ್ಪಿನ್ನರ್ ಗಳನ್ನೊಳಗೊಂಡಂತೆ ಮೂವರು ವೇಗದ ಬೌಲರ್ಗಳನ್ನು ಕಣಕ್ಕಿಳಿಸಿದ್ದಾರೆ.
ಭಾರತ-ಬಾಂಗ್ಲಾದೇಶ ನಡುವೆ 14ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇದುವರೆಗೆ ಉಭಯ ತಂಡಗಳ ನಡುವೆ 13 ಟೆಸ್ಟ್ ಪಂದ್ಯಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ಬಾಂಗ್ಲಾ ಇಲ್ಲಿಯವರೆಗೂ ಭಾರತದ ವಿರುದ್ಧ ಯಾವುದೇ ಟೆಸ್ಟ್ ಪಂದ್ಯ ಗೆದ್ದಿಲ್ಲ. ರೋಹಿತ್ ಶರ್ಮಾ(ನಾಯಕ) ಯಶಸ್ವಿ ಜೈಸ್ವಾಲ್, ಶುಭ್‍ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್(ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಶಾಡ್ಮನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ(ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್(ವಿ,ಕೀ), ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್ ಮತ್ತು ನಹಿದ್ ರಾಣಾ ಭಾರತ ಟೆಸ್ಟ್ ತಂಡಕ್ಕೆ ಎರಡು ವರ್ಷಗಳ ನಂತರ ರಿಷಬ್ ಪಂತ್ ಕಮ್‍ಬ್ಯಾಕ್ ಮಾಡಿದ್ದಾರೆ. ಟೆಸ್ಟ್ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಅವರಿಗಿದು ಉತ್ತಮ ಅವಕಾಶ. ಅದೇ ರೀತಿ, ರನ್ ಮಷಿನ್ ವಿರಾಟ್ ಕೊಹ್ಲಿ 8 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಮೈದಾನಕ್ಕಿಳಿಯುತ್ತಿರುವುದು ಗಮನಾರ್ಹ. ಇದರ ಜೊತೆಗೆ, ಟೀಂ ಇಂಡಿಯಾ ನೂತನ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಗೌತಮ್ ಗಂಭೀರ್ ಅವರಿಗೂ ಮೊದಲ ಟೆಸ್ಟ್ ಪಂದ್ಯ. ಈ ಎಲ್ಲಾ ಕಾರಣಗಳಿಂದ ಈ ಸರಣಿಯ ಮೇಲೆ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆಗಳಿವೆ. ಈ ಟೆಸ್ಟ್ ಸರಣಿ ಭಾರತಕ್ಕೆ ಮುಂದೆ ನ್ಯೂಜಿಲೆಂಡ್ ಸರಣಿ ಹಾಗು ಸುದೀರ್ಘ ಅವಧಿಯ ಅತ್ಯಂತ ಮಹತ್ವದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಒಂದು ರೀತಿಯಲ್ಲಿ ರಿಹಾರ್ಸಲ್ ಎನ್ನಬಹುದು.










