ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ನಿಧನ…

96
firstsuddi

ನವದೆಹಲಿ : ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಅವರು ಹೃದಯ ಸ್ತಂಭನದಿಂದ (ಕಾರ್ಡಿಯಾಕ್ ಅರೆಸ್ಟ್ ) ಸಾವನ್ನಪ್ಪಿದ್ದಾರೆ.

32ನೇ ವಯಸ್ಸಿಗೆ ಪಂಖೂರಿ ಅವರು ಡಿ.24ರಂದು ಹೃದಯ ಸ್ತಂಭನದಿಂದ ನಿಧನರಾದರು. ‘ಪಂಖೂರಿ’ ಎಂಬ ಮಹಿಳಾ ಕೇಂದ್ರಿತ ಸಾಮಾಜಿಕ ಸಮುದಾಯ ವೇದಿಕೆ ಮತ್ತು ಸ್ಟಾರ್ಟ್ ಅಪ್ ಗ್ರಾಬ್ ಹೌಸ್ ನ ಸಂಸ್ಥಾಪಕಿಯಾಗಿದ್ದರು. ಇವರ ಅಗಲಿಕೆಗೆ ಅನೇಕ ಉದ್ಯಮಿಗಳು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಪಂಖೂರಿ ಅವರು ಮೂಲತಃ ಝಾನ್ಸಿಯವರಾಗಿದ್ದು, ರಾಜೀವ್ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ನಂತರ ಟೀಚ್ ಫಾರ್ ಇಂಡಿಯಾದಲ್ಲಿ ಫೆಲೋಶಿಪ್ ಪೂರ್ಣಗೊಳಿಸಿದರು.