ಭಾರತದಲ್ಲಿ ಕಡು ಬಡತನ ಕನಿಷ್ಠ ಮಟ್ಟದಲ್ಲಿ ಇಳಿಕೆ.

30

ನವದೆಹಲಿ: ದೇಶದಲ್ಲಿ ಕನಿಷ್ಠ ಮಟ್ಟಕ್ಕೆ ಕಡು ಬಡತನ ಇಳಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ಅಧ್ಯಯನದ ಪ್ರಕಾರ 2024 ರಲ್ಲಿ ಭಾರತದಲ್ಲಿ ಬಡತನದ ಪ್ರಮಾಣ ಶೇಕಡ 5 ಕ್ಕಿಂತ ಇಳಿಕೆಯಾಗಿದೆ. ಭಾರತದಲ್ಲಿ ಕಡು ಬಡತನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿದಿರುವುದಾಗಿ ಅಧ್ಯಯನದಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಕಡು ಬಡತನ ಅತ್ಯಂಕ ಕನಿಷ್ಠ ಮಟ್ಟದಲ್ಲಿರುವುದರೊಂದಿಗೆ ಬಡತನ ಪ್ರಮಾಣ ಈಗ ಶೇಕಡ 4 ರಿಂದ ಶೇಕಡ 4.5 ರಷ್ಟಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶ ಮತ್ತು ಗ್ರಾಮೀಣದಲ್ಲಿನ ಬಡತನದ ಪ್ರಮಾಣದಲ್ಲಿ ಗಮನಾರ್ಹ ಸುಧಾರಣೆ ಆಗಿದೆ ಎಂದು ಸರ್ಕಾರದ ಬಳಕೆ ವೆಚ್ಚ ಸಮೀಕ್ಷೆಯಿಂದ ಪಡೆದ ವರದಿಯನ್ನಾಧರಿಸಿದ ಅಧ್ಯಯನ ತಿಳಿಸಿದೆ. ಸಮೀಕ್ಷೆಯ ಪ್ರಕಾರ, 2024ರ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಬಡತನ ಶೇಕಡ 4.86 ಎಂದು ಅಂದಾಜಿಸಲಾಗಿದೆ. 2023ರ ಆರ್ಥಿಕ ವರ್ಷದಲ್ಲಿ ಶೇಕಡ 7.2ರಷ್ಟು ಇಳಿಕೆಯಾಗಿದೆ. ಆರ್ಥಿಕ ವರ್ಷ 2012ರಲ್ಲಿ ಶೇಕಡ 25.7 ರಷ್ಟಿತ್ತು.