ಬಿಂಡ್(ಮಧ್ಯಪ್ರದೇಶ): ಭಾರತೀಯ ವಾಯುಪಡೆಯ ತರಬೇತಿ ವಿಮಾನ ಮಧ್ಯಪ್ರದೇಶದ ಬಿಂಡ್ ಎಂಬಲ್ಲಿ ಪತನವಾಗಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೈಲಟ್ ಅಭಿಲಾಷ್ ಐಎಎಫ್ ಮಿರಾಜ್ 2000 ವಿಮಾನದಲ್ಲಿ ಇಂದು ಬೆಳಿಗ್ಗೆ ತರಬೇತಿ ಪಡೆಯುತ್ತಿದ್ದರು. ಈ ವೇಳೆ ತಾಂತ್ರಿಕ ದೋಷ ಉಂಟಾಗಿದೆ. ಘಟನೆಯಲ್ಲಿ ಪೈಲಟ್ ಅಭಿಲಾಷ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ.










