ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪತನ : ಪೈಲಟ್ ಸಾವು…

123
firstsuddi

ನವದೆಹಲಿ : ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವು ಪಂಜಾಬ್ ಮೊಗಾ ಬಳಿ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾರೆ.

ಪಾಶ್ಚಿಮಾತ್ಯ ವಲಯದಲ್ಲಿ ಐಎಎಫ್ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್ ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಮೃತಪಟ್ಟಿದ್ದಾರೆ. ಯುದ್ಧ ವಿಮಾನದಲ್ಲಿ ಪೈಲಟ್ ದಿನನಿತ್ಯದ ತರಬೇತಿ ನಡೆಸುತ್ತಿದ್ದರು ಎಂದು ಭಾರತೀಯ ವಿಮಾನ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಭಿನವ್ ಚೌಧರಿ ಅವರ ಸಾವಿಗೆ ಸಂತಾಪ ಸೂಚಿರುವ ಇಂಡಿಯನ್ ಏರ್ ಫೋರ್ಸ್, ಅಭಿನವ್ ಅವರ ಸಾವಿನಿಂದ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಟ್ವೀಟ್ ಮಾಡಿದೆ.

ಇನ್ನೂ ಈ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.