ಭಾರತೀಯರು ಪ್ರತಿಭಾವಂತರು : ರಷ್ಯಾ ಅಧ್ಯಕ್ಷ ಪುಟಿನ್ ಬಣ್ಣನೆ…

72
firstsuddi

ಮಾಸ್ಕೋ : ಭಾರತೀಯರು ಪ್ರತಿಭಾವಂತರು ಹಾಗೂ ಪರಿಶ್ರಮಿಗಳು. ಅಭಿವೃದ್ಧಿಯ ವಿಚಾರದಲ್ಲಿ ಅತ್ಯದ್ಭುತ ಫಲಿತಾಂಶ ಕಂಡುಕೊಳ್ಳಲು ಬೇಕಾದಷ್ಟು ಸಾಮರ್ಥ್ಯ ಭಾರತೀಯರಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಣ್ಣಿಸಿದ್ದಾರೆ.

ರಷ್ಯಾದ ಏಕತಾ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಭಾರತೀಯರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾವು ಭಾರತವನ್ನು ನೋಡೋಣ. ಆಂತರಿಕ ಅಭಿವೃದ್ಧಿ ಸಾಧಿಸಲು ಭಾರತದ ಜನರು ಪ್ರತಿಭಾವಂತರಿದ್ದಾರೆ. ಭಾರತ ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶವನ್ನು ಸಾಧಿಸುತ್ತದೆ. ಈ ವಿಚಾರದಲ್ಲಿ ಅನುಮಾನವೇ ಬೇಡ. ಭಾರತದಲ್ಲಿರುವ ಸುಮಾರು ಒಂದೂವರೆ ಶತಕೋಟಿ ಜನರಲ್ಲಿ ಆ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

ಈ ವೇಳೆ ಪುಟಿನ್ ಆಫ್ರಿಕಾದಲ್ಲಿಯ ವಸಾಹತುಶಾಹಿ ಹಾಗೂ ರಷ್ಯಾದಲ್ಲಿರುವ ವಿಶಿಷ್ಟ ನಾಗರಿಕತೆ ಹಾಗೂ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ.