ಭಾರಿ ಮಳೆಗೆ ಮನೆಯ ಶೀಟ್ ಮೇಲಿದ್ದ ಕಲ್ಲು ಬಿದ್ದು ಬಾಲಕ ಸಾವು…

91
firstsuddi

ವಿಜಯಪುರ : ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಮನೆಯ ತಗಡಿನ ಶೀಟ್ ಮೇಲಿದ್ದ ಕಲ್ಲು ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರ ವಲಯದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.

ಸಚಿನ್ ಮಹಾಂತೇಶ ಸೊನ್ನದ (14) ಮೃತ ಬಾಲಕ. ಮನೆಗೆ ತಗಡಿನ ಶೀಟ್ ಅಳವಡಿಸಿ ಮೇಲೆ ಕಲ್ಲು ಇಡಲಾಗಿತ್ತು. ಜೋರಾಗಿ ಬೀಸಿದ ಗಾಳಿ, ಮಳೆಗೆ ತಗಡಿನ ಶೀಟ್ ಗಳು ಹಾರಿ ಹೋಗಿವೆ. ಈ ವೇಳೆ ಅದರ ಮೇಲೆ ಇಟ್ಟಿದ್ದ ಕಲ್ಲು ಮಲಗಿದ್ದ ಬಾಲಕನ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.