ಭ್ರಷ್ಟಾಚಾರ ಆರೋಪ : ಆಂಧ್ರ ಸಿಎಂ ಸಂಬಂಧಿ ವೈಎಸ್ ಕೊಂಡ ರೆಡ್ಡಿ ಬಂಧನ…

59
firstsuddi

ಹೈದರಾಬಾದ್: ಆಂದ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿ ವೈಎಸ್ ಕೊಂಡ ರೆಡ್ಡಿಯನ್ನು ಭ್ರಷ್ಟಾಚಾರ ಆರೋಪದಡಿ ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ವೈಎಸ್ ಕೊಂಡ ರೆಡ್ಡಿ ಅವರು ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ವೈಎಸ್ಆರ್ ಕಡಪದ ಚಕ್ರಾಯಪೇಟೆ ಮಂಡಲದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದರು. ವೈಎಸ್ಆರ್ ಜಿಲ್ಲೆ ಚಕ್ರಾಯಪೇಟ ವಲಯದಲ್ಲಿ ಎಸ್ ಆರ್ ಕೆ ಕನ್ಸ್ ಟ್ರಕ್ಷನ್ ಕಂಪನಿ ರಾಯಚೋಟಿ-ಪುಲಿವೆಂದುಲ ರಸ್ತೆ ಕಾಮಗಾರಿ ನಡೆಸುತ್ತಿದೆ.

ಈ ಕಾಮಗಾರಿಯ ವೇಳೆ ಹಣಕ್ಕಾಗಿ ಕೊಂಡಾರೆಡ್ಡಿ ಬೇಡಿಕೆ ಇಟ್ಟಿದ್ದಾರೆ ಮತ್ತು ಒಂದು ವೇಳೆ ಲಂಚ ನೀಡದಿದ್ದರೆ, ಸರ್ಕಾರದ ಮೇಲೆ ಪ್ರಭಾವ ಬೀರಿ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕನ್ಸ್ ಟ್ರಕ್ಷನ್ ಕಂಪನಿಯ ಗುತ್ತಿಗೆದಾರರು ಚಕ್ರಾಯಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದು, ಕೊಂಡಾರೆಡ್ಡಿಯನ್ನು ಬಂಧಿಸಿದ್ದಾರೆ.