ಮಂಗಳೂರಿನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ-ಮೂಡಿಗೆರೆ ತಾಲ್ಲೂಕಿನ ಜನರಲ್ಲಿ ಆತಂಕ…

1082
firstsuddi

ಮೂಡಿಗೆರೆ : ಮಂಗಳೂರು ನಗರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, 51ರ ಹರೆಯದ ಪುರಷನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಈ 51ರ ಹರೆಯದ ವ್ಯಕ್ತಿ ಬೋಳೂರಿನವರಾಗಿದ್ದು ರೋಗಿ ಸಂಖ್ಯೆ 536 ರ ಜೊತೆಗೆ ಸಂಪರ್ಕ ಹೊಂದಿದ್ದರು. ಇವರಿಗೆ ಕೊರೋನಾ ಲಕ್ಷಣ ಕಂಡು ಬಂದಿದ್ದು ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಗ್ರೀನ್ ಜೋನ್ ಜಿಲ್ಲೆಯಾದ ಚಿಕ್ಕಮಗಳೂರು ಗಡಿ ಭಾಗವಾದ ಕೊಟ್ಟಿಗೆಹಾರದ ಮೂಲಕ ಬರುತ್ತಿರುವ ಸಾವಿರಾರು ಜನರನ್ನು ಕಂಡು ಮೂಡಿಗೆರೆ ತಾಲ್ಲೂಕಿನ ಜನ ಆತಂಕಕ್ಕೀಡಾಗಿದ್ದು, ಮಂಗಳೂರು, ಕಾಸರಗೋಡು ಕಡೆಯಿಂದ ನೂರಾರು ವಾಹನಗಳು ಬರುತ್ತಿದ್ದು, ಈಗಾಗಲೇ ಮಂಗಳೂರು ಜಿಲ್ಲೆಯಲ್ಲಿ ಹಲವು ಕೊರೊನಾ ಪ್ರಕರಣಗಳಿದ್ದು, ಅಲ್ಲಿಯ ಜನರನ್ನು ಗ್ರೀನ್ ಜೋನ್ ಆದ ನಮ್ಮ ಜಿಲ್ಲೆಗೆ ಒಳಬಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಅನಾಹುತ ಕಾದಿದೆ. ಕೂಡಲೇ ಆನ್‍ಲೈನ್ ಪಾಸ್ ತಡೆಯಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತದ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.