ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗೆ ಸಹೋದ್ಯೋಗಿಗಳಿಂದ ಸೀಮಂತ…

171
firstsuddi

ಮಂಗಳೂರು:  ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗೆ ಸಹೋದ್ಯೋಗಿಗಳು ಸೀಮಂತ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿದ್ದರು. ಮಂಗಳೂರು ಪೂರ್ವ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಯಾದ ಗೌರವ್ವ ಎಂಬುವವರಿಗೆ ಠಾಣಾ ಪೊಲೀಸ್  ನಿರೀಕ್ಷಕರಾದ ಶಾಂತಾರಾಮ್ ಹಾಗೂ ಠಾಣೆಯ ಇತರ ಅಧಿಕಾರಿಗಳು ಸಿಬ್ಬಂದಿಗಳು ಸೀಮಂತ ಕಾರ್ಯಕ್ರಮವನ್ನು ನಗರದ ಸಂತ ಸೆಬಾಸ್ಟಿಯನ್ ಸಭಾಂಗಣ ಬೆಂದೂರಿನಲ್ಲಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗೌರವ್ವ ಅವರ ಪತಿ ಶಿವಾನಂದ ಮತ್ತು ಅವರ ಮನೆಯವರು ಭಾಗವಹಿಸಿದ್ದರು.