ಮಂಗಳೂರು : ವೇತನ ಕೇಳಲು ಬಂದ ಸಿಬ್ಬಂದಿ ಮೇಲಿನ ಕೋಪಕ್ಕೆ ಮಗನಿಗೆ ಗಂಡು ಹಾರಿಸಿದ ತಂದೆ…

77
firstsuddi

ಮಂಗಳೂರು : ವೇತನ ಕೇಳಲು ಬಂದ ನೌಕರನ ಮೇಲಿನ ಕೋಪಕ್ಕೆ ತಂದೆಯೊಬ್ಬ ತನ್ನ ಮಗನ ಮೇಲೆಯೇ ಗುಂಡುಹಾರಿಸಿದ ಘಟನೆ ಮಂಗಳೂರಿನ ಜೆಪ್ಪು ಮೋರ್ಗನ್ ಗೇಟ್ ಬಳಿ ನಡೆದಿದೆ.

ನಿನ್ನೆ ನಗರದ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಕಚೇರಿಯಲ್ಲಿ ಕೇಲಸ ಮಾಡುತ್ತಿದ್ದ ನೌಕರರೊಬ್ಬರು ವೇತನ ಕೇಳಿ ಮಾಲೀಕ ರಾಜೇಶ್ ಪ್ರಭು ಹತ್ತಿರಕ್ಕೆ ಬಂದಿದ್ದರು. ಈ ವೇಳೆ ಮಾಲೀಕ ರಾಜೇಶ್ ಪ್ರಭು ಬಳಿ ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಾರೆ. ಆಗ ರಾಜೇಶ್ ಕಚೇರಿ ಒಳಗಿಂದ ತನ್ನ ಲೈಸೆನ್ಸ್ ರಿವಾಲ್ವರ್ ಹಿಡಿದು ಹೊರಬಂದರು. ರಾಜೇಶ್ ಸಿಟ್ಟಿನಿಂದ ಪಿಸ್ತೂಲ್ ತೆಗೆದು ಹೆದರಿಸಲು ಯತ್ನಿಸಿದ್ದಾರೆ. ಆದರೆ ಅದು ಮಿಸ್ ಫೈರ್ ಆಗಿ ಅವರ ಪುತ್ರ ಸುಧೀಂದ್ರನ ತಲೆಯ ಭಾಗಕ್ಕೆ ತಗುಲಿದೆ.

ಈ ಎಲ್ಲ ದೃಶ್ಯಾವಳಿಗಳು ಕಚೇರಿ ಹೊರಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ವಿಚಾರಣೆ ವೇಳೆಯೂ ರಾಜೇಶ್ ಪ್ರಭು ಸತ್ಯವನ್ನು ಬಾಯ್ಬಿಟ್ಟಿದ್ದರು. ಸದ್ಯ ಸುಧೀಂದ್ರ ಗಂಭೀರ ಸ್ಥಿತಿಯಲ್ಲಿದ್ದು, ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ.  ಪಂದೆಶ್ವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.