ಮಂಡ್ಯ : ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಯಾಗಬೇಕು : ಸುಮಲತಾ ಆಗ್ರಹ…

85
firstsuddi

ಮಂಡ್ಯ : ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಆಗ್ರಹಿಸಿದ್ದಾರೆ.

ನಿನ್ನೆ ಗಣಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನನಕೆರೆ ಮತ್ತು ಹಂಗರಹಳ್ಳಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವೀಕ್ಷಣೆಗೆ ಹೋಗದಂತೆ ಅಡ್ಡಿಪಡಿಸಿದ್ದನ್ನು ನೋಡಿ ಇದೇನ್ ಭಾರತ-ಪಾಕಿಸ್ತಾನ ಗಡಿನಾ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲಿನ ಜನರ ಗೋಳು ಕೇಳೊರಿಲ್ಲದಂತಾಗಿದೆ. ಸ್ಥಳೀಯರ ಕಷ್ಟ ಕೇಳಿ ನಾನು ಶಾಕ್ ಆಗೋದೆ. ಮನೆಗಳಲ್ಲಿ ಬಿರುಕು ಬಿಟ್ಟಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ ಎಂದರು.

ಚೆನ್ನನಹಳ್ಳಿಯಲ್ಲಿನ ಜನರಿಗೆ ಉಸಿರಾಟದ ಸಮಸ್ಯೆಯಾಗಿದೆ, ಹಾರ್ಟ್ ಆಟ್ಯಾಕ್ ಆಗಿದೆ. ಹಂಗರಹಳ್ಳಿಯಲ್ಲಿ ದಿನಕ್ಕೆ 500 ಲಾರಿ ಸಂಚಾರ ಮಾಡುತ್ತಿವೆ. ಆದ್ರೆ ಇದರ ಬಗ್ಗೆ ಯಾರು ಕೇಳೋರಿಲ್ಲದಂತಾಗಿದೆ. ನೀವು ರಾಜಕೀಯದಲ್ಲೇ ಸಿನಿಮಾ ತೋರಿಸ್ತಿದ್ದೀರಾ. ಒಂದೇ ದಿನಕ್ಕೆ ನಾನು ಇಷ್ಟೊಂದು ಪ್ರಮಾಣದ ಅಕ್ರಮ ಕಂಡಿದ್ದೇನೆ. ಇದು ನಿಮಗೆ ಕಂಡಿಲ್ಲವೆ? ಇಷ್ಟೊಂದು ಅಕ್ರಮ ನಡೀತಾ ಇದ್ರೂ ಯಾಕೆ ಸುಮ್ಮನಿದ್ದೀರಿ? ಎಂದು ಸ್ಥಳೀಯ ಶಾಸಕರ ವಿರುದ್ಧ ಗುಡುಗಿದರು.

ದೊಡ್ಡ ದೊಡ್ಡವರೇ ಬೇನಾಮಿ ಹೆಸರಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ. ಡಿಸಿ ಎಲ್ಲರನ್ನ ಪ್ರಶ್ನೆ ಮಾಡಬೇಕಿದೆ. ನಾವು ಅಕ್ರಮಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗುಂಡಾಗಳು ಬಂದು ಅಡ್ಡಿ ಪಡಿಸಿದ್ರು. ಇದೆಲ್ಲಾ ನಿಮಗೆ ಕಾಣ್ತಿಲ್ವಾ? ಅಥವಾ ಇದನ್ನೆಲ್ಲಾ ನೀವೆ ಮಾಡ್ತಿದ್ದೀರಾ? ಇದಕ್ಕೆಲ್ಲಾ ಉತ್ತರ ನೀಡಬೇಕು ಎಂದರಲ್ಲದೇ ಇಂದಿನ ಘಟನೆಗೆ ಸಂಬಂಧಿಸಿದಂತೆ ನೀವು ರಾಜೀನಾಮೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.