ಗದಗ : ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು ಟಿವಿ ಖರೀದಿಸಿದ ತಾಯಿಯ ತ್ಯಾಗವನ್ನು ಮೆಚ್ಚಿ ಬಡ ಕುಟುಂಬಕ್ಕೆ ಮಾಜಿ ಸಚಿವ ಜಮೀರ್ ಅಹಮ್ಮದ್ ಅವರು ಸಹಾಯ ಹಸ್ತ ಚಾಚಿದ್ದಾರೆ. ಈಲ್ಲೆಯ ನರಗುಂದ ತಾಲ್ಲೂಕಿನ ರಡ್ಡೇರ ನಾಗನೂರ ಗ್ರಾಮದ ಕಸ್ತೂರಿ ಎಂಬುವವರು ತನ್ನ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಅಡವಿಟ್ಟು ಟಿವಿಯನ್ನು ಖರೀದಿಸಿದ್ದರು. ಈ ಸುದ್ದಿಯನ್ನು ತಿಳಿದ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಬಡ ಕುಟುಂಬಕ್ಕೆ 50,000ರೂ ಹಣವನ್ನು ತಮ್ಮ ಆಪ್ತ ಮೂಲಕ ತಲುಪಿಸಿದ್ದಾರೆ. ಅಲ್ಲದೇ ಮಕ್ಕಳ ಶಿಕ್ಷಣಕ್ಕೂ ಸಹಾಯ ಮಾಡುವ ಭರವಸೆಯನ್ನು ನೀಡಿದ್ದಾರೆ.










