ಮದುವೆ ಮಂಟಪಕ್ಕೆ 7 ಕುದುರೆಗಳ ಜೊತೆ ರಾಯಲ್ ಆಗಿ ಎಂಟ್ರಿ ಕೊಡಲಿದ್ದಾರೆ ವಿಕ್ಕಿ ಕೌಶಲ್.

81
firstsuddi

ಮುಂಬೈ : ಕೆಲವೇ ದಿನಗಳಲ್ಲಿ ಬಾಲಿವುಡ್ ಸ್ಟಾರ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನಡೆಯಲಿದ್ದು, ಅದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ರಾಜಸ್ಥಾನದ ಖಾಸಗಿ ಹೋಟೆಲ್ ನಲ್ಲಿ ವಿವಾಹ ಸಮಾರಂಭ ಜರುಗಲಿದ್ದು, ವಿಕ್ಕಿ ಕೌಶಲ್ ಅವರು 7 ಬಿಳಿ ಕುದುರೆಗಳ ಜತೆಯಲ್ಲಿ ಮಂಟಪಕ್ಕೆ ರಾಯಲ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂದು ವರದಿ ಆಗಿದೆ.

ಕನಸಿನ ಲೋಕದ ರೀತಿಯಲ್ಲಿ ಮದುವೆ ಆಗಬೇಕು ಎಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಆಸೆಪಟ್ಟಿದ್ದಾರೆ ಎನ್ನಲಾಗಿದ್ದು, ಅದಕ್ಕೆ ತಕ್ಕಂತೆಯೇ ಮದುವೆ ತಯಾರಿ ನಡೆಯುತ್ತಿದೆ. ಮದುವೆ ಮಂಟಪದಲ್ಲಿ ಬಂದ ಸೆಲೆಬ್ರಿಟಿಗಳು ಫೋಟೋ ಕ್ಲಿಕ್ಕಿಸಿದಂತೆ ನೋಡಿಕೊಳ್ಳಲು 100 ಬೌನ್ಸರ್ ಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನೂ ವಿಕ್ಕಿ-ಕತ್ರಿನಾ ಮದುವೆ ಯಾವ ರೀತಿ ನಡೆಯಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.