ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ವ್ಯಾನ್ ಉರುಳಿ ಬಿದ್ದು 7 ಮಂದಿ ದುರ್ಮರಣ…

193
firstsuddi

ತೆಲಂಗಾಣ : ಮದುವೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವ್ಯಾನ್ ಬೆಟ್ಟದಿಂದ ಉರುಳಿ ಬಿದ್ದು 7 ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗೋಕವರಂ ಮಂಡಲದ ತಂಟಿಕೊಂಡ ಘಾಟ್ ರಸ್ತೆಯ ವೆಂಟಕೇಶ್ವರಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಮೃತರನ್ನು ಗೋಕವರಂ ವಲಯದ ತಕುರ್ಪಲೆಂ ಗ್ರಾಮಕ್ಕೆ ಸೇರಿದವರು ಎಂದು ಗುರಿತಿಸಲಾಗಿದ್ದು, ಮೃತರು ತಮ್ಮ ಸಂಬಂಧಿಕರ ಮದುವೆ ಸಮಾರಂಭವನ್ನು ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ವ್ಯಾನ್‍ನ ಬ್ರೇಕ್ ಫೇಲ್ ಆಗಿ ತಂಟಿಕೊಂಡ ಬಳಿಯ ಬೆಟ್ಟದಿಂದ ಉರುಳಿ ಬಿದ್ದಿದ್ದು, ಪರಿಣಾಮ 7 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.