ಮಧ್ಯಪ್ರದೇಶ : ಹಕ್ಕಿ ಜ್ವರದಿಂದ 48 ಕಾಗೆಗಳು ಸಾವು…

64
firstsuddi

ಭೋಪಾಲ್ : ಹಕ್ಕಿ ಜ್ವರದಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ 48 ಕಾಗೆಗಳು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಅಗರ್ ಮಲ್ವಾ ಜಿಲ್ಲೆಯಲ್ಲಿ ನಡೆದಿದೆ.

ಕಾಗೆಗಳು ಸತ್ತ ಹಿನ್ನೆಲೆಯಲ್ಲಿ ಅವುಗಳ ಸ್ಯಾಂಪಲ್ ತಪಾಸಣೆಗಾಗಿ ಲ್ಯಾಬೋರೇಟರಿಗೆ ಕಳಿಸಲಾಗಿತ್ತು.ತಪಾಸಣೆ ನಡೆಸಿದಾಗ ಅವುಗಳಲ್ಲಿ ಹಕ್ಕಿ ಜ್ವರ(ಎಚ್5ಎನ್8) ಇರುವುದು ಗೊತ್ತಾಗಿದೆ. 48 ಕಾಗೆಗಳೊಂದಿಗೆ ಒಂದು ಕೋಳಿಯೂ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸದ್ಯ ಪೌಲ್ಟ್ರಿಯಲ್ಲಿರುವ ಇತರ ಕೋಳಿಗಳ ಮಾದರಿಯನ್ನೂ ಕಳಿಸಲಾಗಿದೆ. ಆದರೆ ಅವುಗಳ ವರದಿ ಇನ್ನೂ ಬಂದಿಲ್ಲ. ಅಲ್ಲಿಯವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮಟನ್ ಮಾರಾಟ ಮಾರುಕಟ್ಟೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಎಂದು ಅಗರ್ ಮಾಲ್ವಾ ಜಿಲ್ಲಾಧಿಕಾರಿ ಅಧ್ವೇಶ್ ಶರ್ಮಾ ಮಾಹಿತಿ ನೀಡಿದ್ದಾರೆ.

ಚಳಿಗಾಲದ ಸಂದರ್ಭದಲ್ಲಿ ಹಕ್ಕಿ ಜ್ವರ ಹರಡುವಲ್ಲಿ ವಲಸೆ ಹಕ್ಕಿಗಳು ಮುಖ್ಯ ಕಾರಣವಾಗುತ್ತವೆ. ಹೀಗಾಗಿ ವಲಸೆ ಬರುವ ಹಕ್ಕಿಗಳ ಮೇಲೆ ನಿಗಾ ಇಡಲಾಗುವುದು ಎಂದು ಹೇಳಿದ್ದಾರೆ.