ಕೊಪ್ಪಳ: ಎರಡೂ ದಿನಗಳಿಂದ ಸುರಿದ ಮಳೆಗೆ ಮನೆಯೊಂದು ಕುಸಿದು ಬಿದ್ದು ವೃದ್ಧೆ ಸೇರಿದಂತೆ 20 ದಿನದ ಹಸುಗೂಸು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ನಡೆದಿದೆ.
ಮನೆ ಕುಸಿತದಿಂದ ಹಸುಗೂಸು ಹಾಗೂ ವೃದ್ಧೆ ಫಕೀರಮ್ಮ (60) ಸಾವನ್ನಪ್ಪಿದ್ದಾರೆ. ಬಾಣಂತಿ ಕನಕಮ್ಮಳಿಗೆ ಗಾಯಗಳಾಗಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಮ್ಮಳ ಪತಿ ಮನೆಯ ಹೊರಗಡೆ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.










