ಮನೆ ಮೇಲೆ ಗುಡ್ಡ ಕುಸಿತ – ಮೂವರು ಕಾರ್ಮಿಕರು ಸಾವು…

42
firstsuddi

ಮಂಗಳೂರು : ಭಾರೀ ಮಳೆಗೆ ಮನೆಯೊಂದರ ಮೇಲೆ ಗುಡ್ಡ ಕುಸಿದು ಕೇರಳ ಮೂಲದ ಮೂವರು ಕಾರ್ಮಿಕರು ಸಾವಿಗೀಡಾದ ಘಟನೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ನಡೆದಿದೆ.

ಕೇರಳದ ಪಾಲಕ್ಕಾಡ್ ನಿವಾಸಿ ಬಿಜು(45), ಕೊಟ್ಟಾಂ ನಿವಾಸಿ ಬಾಬು (46) ಮತ್ತು ಸಂತೋಷ್ ಅಲ್ಫೊನ್ಸಾ(46) ಮೃತಪಟ್ಟ ದುರ್ದೈವಿಗಳು. ಕಣ್ಣೂರಿನ ಜಾನಿ ಬದುಕುಳಿದಿದ್ದು ಚಿಕಿತ್ಸೆ ನಡೆಯುತ್ತಿದೆ.

ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಮನೆಯಾಗಿದ್ದು, ನಾಲ್ವರು ಅನೇಕ ವರ್ಷಗಳಿಂದ ಇವರ ತೋಟದ ಕೆಲಸ ಮಾಡುತ್ತಿದ್ದರು. ಕಾರ್ಲೋ ಅವರ ಮನೆಯ ಹತ್ತಿರದಲ್ಲಿ ಆ ನಾಲ್ವರು ಕಾರ್ಮಿಕರಿಗೆ ಪ್ರತ್ಯೇಕ ಮನೆ ನೀಡಿದ್ದರು. ಆದರೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿತ್ತು. ಈ ಸಂದರ್ಭದಲ್ಲಿ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದ್ದಾರೆ.