ಮನೆಗಳ್ಳನ ಬರ್ಬರ ಹತ್ಯೆ!

92
firstsuddi

ಕಲಬುರಗಿ : ಮನೆಗಳ್ಳನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಮಹೇಶ್ ಚಿಡರಗುಂಪಿ (38) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ನಗರದ ಹೊರವಲಯದ ಕೆರೆ ಭೋಸಗಾ ಕ್ರಾಸ್ ಬಳಿ ಈತನ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಮಹೇಶ್ ಮನೆಗೆ ಕೂಡ ಹೋಗಿರಲಿಲ್ಲ. ನಗರದಲ್ಲಿ ಹಾಡಹಗಲೇ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸಿಮನಾಗಿದ್ದ ಈತನ ಮೇಲೆ ನಗರದ ಬಹುತೇಕ ಎಲ್ಲ ಠಾಣೆಗಳಲ್ಲೂ ಕಳ್ಳತನದ ಕೇಸ್ ದಾಖಲಾಗಿವೆ. ಮಹೇಶ್ ಕೊಲೆಗೆ ಕಾರಣ, ಕೊಲೆಗಾರರು ಯಾರು ಎಂಬುದು ನಿಗೂಢವಾಗಿದ್ದು, ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.