ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮಗು ಸೇರಿ ಮೂವರ ಸಾವು…

203
firstsuddi

ಬಳ್ಳಾರಿ : ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಮೂರು ವರ್ಷದ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ನಾಡಂಗ ಗ್ರಾಮದಲ್ಲಿ ನಡೆದಿದೆ. ಇಮಾಮ್ ಬೀ(45), ಹಸೀನಾ(25), ಇಮ್ರಾನ್(3) ಮೃತ ದುರ್ಧೈವಿಗಳು ಎನ್ನಲಾಗಿದ್ದು, ನಿನ್ನೆ ತಡರಾತ್ರಿ ಎಲ್ಲರೂ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಬಳ್ಳಾರಿ ಎಸ್‍ಪಿ ಸಿ.ಕೆ.ಬಾಬಾ ಮತ್ತು ಜಿ.ಪಂ ಸಿಇಓ ನಿತೀಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.