ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ 6 ವಾರದ ಕಂದಮ್ಮ ಬಲಿ…

141
firstsuddi

ನ್ಯೂಯಾರ್ಕ್ : ಮಹಾಮಾರಿ ಕೊರೊನಾ ವೈರಸ್‍ಗೆ ಅಮೆರಿಕಾದ 6 ವಾರದ ಪುಟ್ಟ ಕಂದಮ್ಮ ಬಲಿಯಾಗಿದ್ದು, ಈ ಮೂಲಕ ಸೋಂಕಿಗೆ ಕಿರಿಯ ವಯಸ್ಸಿನ ಕಂದಮ್ಮ ಬಲಿಯಾದ 2ನೇ ಪ್ರಕರಣ ಇದಾಗಿದೆ. ಈ ಕುರಿತು ಟ್ವಿಟರ್ ಮೂಲಕ ಅಲ್ಲಿನ ರಾಜ್ಯಪಾಲರಾದ ನೆಡ್ ಲ್ಯಾಮಂಟ್ ಅವರು ಸ್ಪಷ್ಟಪಡಿಸಿದ್ದು, ಮಗುವನ್ನು ಅನಾರೋಗ್ಯದ ಹಿನ್ನೆಲೆ, ಕಳೆದ ವಾರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮಗು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿರುವುದು ದೃಢವಾಗಿದೆ ಎಂದು ಮಾಹಿತಿ ನೀಡಿದ್ದಾರೆ.