ಮಹಾರಾಷ್ಟ್ರದಲ್ಲಿ ಜಾನ್ಸನ್ ಬೇಬಿ ಪೌಡರ್ ಪರವಾನಗಿ ರದ್ದು…

46
firstsuddi

ಮುಂಬೈ : ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ (ಎಫ್ ಡಿಎ)ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾನ್ಸನ್ ಆ್ಯಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್ ನ ಬೇಬಿ ಪೌಡರ್ ಉತ್ಪಾದನೆಯ ಪರವಾನಗಿಯನ್ನು ರದ್ದುಗೊಳಿಸಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಉತ್ಪನ್ನವಾದ ಜಾನ್ಸನ್ ಬೇಬಿ ಪೌಡರ್ ನವಜಾತ ಶಿಶುಗಳ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ ಇದರ ಪುಡಿಯ ಮಾದರಿ ಮಕ್ಕಳ ಚರ್ಮದ ಪಿಹೆಚ್ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ತಿಳಿಸಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್ ಗುಣಮಟ್ಟದ ತಪಾಸಣೆಯ ಉದ್ದೇಶಗಳಿಂದ ಎಫ್ ಡಿಎ ಪುಣೆ ಮತ್ತು ನಾಸಿಕ್ನಿಂದ ಜಾನ್ಸನ್ ಬೇಬಿ ಪೌಡರ್ ನ ಮಾದರಿಗಳನ್ನು ಪಡೆದುಕೊಂಡಿತ್ತು.

ಪ್ರಯೋಗಾಲಯದಲ್ಲಿ ಈ ಪೌಡರ್ ನ ಪರೀಕ್ಷೆ ಮಾಡಿದ ನಂತರ ಎಫ್ ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಮತ್ತು ನಿಯಮಗಳ ಅಡಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಗೆ ಶೋಕಾಸ್ ನೋಟಿಸ್ ನೀಡಿದೆ. ಹಾಗೇ, ಮಾರುಕಟ್ಟೆಯಿಂದ ಈ ಉತ್ಪನ್ನದ ಸ್ಟಾಕ್ ಅನ್ನು ಹಿಂಪಡೆಯಲು ಕಂಪನಿಗೆ ಸೂಚನೆಗಳನ್ನು ನೀಡಿದೆ.