ಮಹಾರಾಷ್ಟ್ರದಲ್ಲಿ ಹೆಚ್3ಎನ್2 ವೈರಸ್​ಗೆ ಎಂಬಿಬಿಎಸ್ ವಿದ್ಯಾರ್ಥಿ ಸಾವು…

50
firstsuddi

ಮುಂಬೈ : ಮಹಾರಾಷ್ಟ್ರದಲ್ಲಿ ಹೆಚ್3ಎನ್2 ವೈರಸ್​ಗೆ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಇದುವರೆಗೆ ಹೆಚ್3ಎನ್2 ಸೋಂಕಿಗೆ ದೇಶದಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ಅಹಮದ್‌ನಗರದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಿದ್ಯಾರ್ಥಿ ಕಳೆದ ವಾರ ಸ್ನೇಹಿತರೊಂದಿಗೆ ಕೊಂಕಣದ ಅಲಿಬಾಗ್ ಗೆ ಪ್ರವಾಸಕ್ಕೆ ಹೋಗಿದ್ದ. ಅಲ್ಲಿಂದ ಬಂದ ನಂತರ ಅವನ ಆರೋಗ್ಯ ಹದಗೆಟ್ಟಿದೆ. ನಂತರ ಅವನನ್ನು ಅಹಮದ್‌ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾನೆ.

ಯುವಕನಿಗೆ ಹೆಚ್3ಎನ್2, ಕೊರೊನಾ ಟೆಸ್ಟ್ ಮಾಡಲಾಗಿದ್ದು, ಎರಡು ಸೋಂಕು ಪತ್ತೆಯಾಗಿವೆ. ಈ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆಯಿಂದ ಸಮಿತಿ ನೇಮಿಸಲಾಗಿದೆ. ವರದಿ ಬಂದ ನಂತರ ರೋಗಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯಾಧಿಕಾರಿ ಡಾ.ಅನಿಲ್ ಬೋರ್ಗೆ ತಿಳಿಸಿದ್ದಾರೆ.

ಹೆಚ್3ಎನ್2 ಇನ್‍ಫ್ಲುಯೆಂಜಾಗೆ ಕರ್ನಾಟಕದಲ್ಲಿ ಮೊದಲ ಸಾವಾಗಿತ್ತು. ಬಳಿಕ ಹರಿಯಾಣದಲ್ಲಿ ವರದಿಯಾಗಿತ್ತು. ಇದೀಗ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲೂ ತಲಾ ಒಂದು ಬಲಿಯಾಗಿದೆ. ಈ ರೋಗವನ್ನು 4-5 ದಿನಗಳಲ್ಲಿ ಗುಣಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ, ಸೋಂಕು ವೇಗವಾಗಿ ಹರಡುತ್ತಿದ್ದು, ದೇಶಾದ್ಯಂತ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.