ಮಹಿಳೆ ಕೊಲೆ.. ವರದಕ್ಷಿಣೆಗಾಗಿ ಪತಿಯೇ ಕೊಂದಿರುವ ಶಂಕೆ…

59
firstsuddi

ನೆಲಮಂಗಲ : ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯನ್ನು ಕೊಲೆಗೈದ ಘಟನೆ ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಶೃತಿ (29) ಕೊಲೆಯಾದ ದುರ್ದೈವಿ. ವರದಕ್ಷಿಣೆಗಾಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಪತ್ನಿಗೆ ಪತಿ ಕೃಷ್ಣಮೂರ್ತಿ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನಂತೆ. ತವರಿನಿಂದ ಹಣ ತೆಗೆದುಕೊಂಡು ಬಾರದ ಕಾರಣಕ್ಕೆ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.