ಮಾನವನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲಿನ ವಿಕೃತಿಯ ಕೆಲಸಗಳಿಂದ ಹವಾಮಾನ ಬದಲಾಗುತ್ತಿದೆ- ಚಿಪ್ರಗುತ್ತಿ ಪ್ರಶಾಂತ್

292

ಮೂಡಿಗೆರೆ : ದಶಕಗಳು ಕಳೆದರೂ ಧರ್ಮಸ್ಥಳ ಶ್ರೀಮಂಜುನಾಥನ ಸನ್ನಿಧಿಯ ಸನಿಹದ ನೇತ್ರಾವತಿಯಲ್ಲಿ ನೀರು ಕಡಿಮೆಯಾದ ದಿನವೇ ಇಲ್ಲ. ಎಷ್ಟೇ ನೀರಿಗೆ ಬರ ಬಂದರೂ ನೇತ್ರಾವತಿ ಬರಿದಾದ ಉದಾಹರಣೆಗಳಿಲ್ಲ.ಆದರೆ ಈ ವರ್ಷ ಬರದ ಛಾಯೆ ಪ್ರಕೃತಿಯ ಯಾವುದೇ ಮುನ್ಸೂಚನೆಯಲ್ಲದೇ ಬಂದಿರುವುದು ಜನರಲ್ಲಿ ಒಂದೆಡೆ ಆತಂಕಗೊಳ್ಳಲು ಕಾರಣವಾಗಿದೆ.
ಚಾರ್ಮಾಡಿ ಘಾಟ್‍ನಲ್ಲಿ ಹರಿಯುವ ಸೋಮಾವತಿ ಹೊಳೆ ನೇರವಾಗಿ ನೇತ್ರಾವತಿಯನ್ನು ಸೇರುತ್ತಾಳೆ. ಆದರೆ ಈ ವರುಷ ಮಲೆನಾಡಿನ ಭಾಗದಲ್ಲಿ ಮಳೆಯಿಲ್ಲದೇ ಸೋಮಾವತಿ ನೇತ್ರಾವತಿ ನದಿಗಳು ಮಾತ್ರವಲ್ಲ ನೀರಿನ ಅಂತರ್ಜಲ ಕೊರತೆಗೆ ಹೇಮಾವತಿಯು ಇದಕ್ಕಿಗಿಂತ ಭಿನ್ನವಾಗಿಲ್ಲ.ದೇವರ ಪ್ರಸಿಧ್ದ ಸ್ಥಳ ಧರ್ಮಸ್ಥಳದ ನೇತ್ರಾವದಿ ನದಿ ಬತ್ತಿರುವುದು ಇತಿಹಾಸವೇ ಸರಿ.ಅಂತಹ ಪರಿಸ್ಥಿತಿಯಲ್ಲಿ ಈಬಾರಿ ನೀರಿನ ಕೊರತೆಯ ಬಿಸಿ ಶ್ರೀಮಂಜುನಾಥನ ಸನ್ನಿದಿಗೆ ಸಾಗುವ ಭಕ್ತಾದಿಗಳಿಗೂ ತಟ್ಟಿರುವುದು ವಿಪರ್ಯಾಸ.ಭಕ್ತಾದಿಗಳಲ್ಲಿ ಆತಂಕ ಹಾಗೂ ಆಶ್ಚರ್ಯಕ್ಕೆ ಎಡೆ ಮಾಡಿದೆ.ಪಶ್ಚಿಮ ಘಟ್ಟದ ಸರಣಿಯಲ್ಲಿ ಹಾದು ಹೋಗಿರುವ ಸೋಮಾವತಿ ಹೊಳೆ ಬರಿದಾಗಿರುವುದು ನೇತ್ರಾವತಿ ನದಿಯನ್ನು ನಂಬಿದ ಭಕ್ತರಿಗೆ ಮನಸ್ಸಿಗೆ ಆಘಾತ ತಂದಿದೆ.
ಕಳೆದ ವರ್ಷ ಮಲೆನಾಡಿನಲ್ಲಿ ಮೇ ತಿಂಗಳಿನಲ್ಲೇ ಭರ್ಜರಿ ಮಳೆ ಎರಡು ತಿಂಗಳಿನಲ್ಲಿ ಎಲ್ಲ ಕಡೆ ಸುರಿದಿದ್ದು ನಂತರ ಸ್ವಲ್ಪ ಸಮಯ ಬಿಡುವು ನೀಡಿ ನಂತರ ಅಲ್ಪ ಸ್ವಲ್ಪ ಮಳೆಯಾಗಿತ್ತು.ಆದ್ದರಿಂದ ನೀರಿಗೆ ಬರ ಬಂದಿರಲಿಲ್ಲ.ಆದರೆ ಶ್ರೀಮಂಜುನಾಥ ಸ್ವಾಮಿಯ ಸನ್ನಧಿಯಲ್ಲೇ ನೀರಿನ ಕೊರತೆ ಎದುರಾಗಿರುವುದು ಧರ್ಮಾಧಿಕಾರಿ ಡಿ.ವೀರೆಂದ್ರ ಹೆಗ್ಗಡೆಯವರಿಗೆ ಆತಂಕ ಮನೆ ಮಾಡಿದ್ದು, ಭಕ್ತಾದಿಗಳಿಗೆ ಕೆಲವು ದಿನ ಧರ್ಮಸ್ಥಳಕ್ಕೆ ಪ್ರಯಾಣಿಕರು ತಂಗಲು ತಮ್ಮ ಪ್ರವಾಸವನ್ನು ನೀರಿನ ಕೊರತೆಯಿಂದ ಮುಂದೂಡಿ ಎಂದು ಪತ್ರ ಹೊರಡಿಸಿರುವುದು ಪ್ರಕೃತಿಯ ಮುನಿಸಿಗೆ ಹಿಡಿದ ಕೈಗನ್ನಡಿಯಾಗಿದೆ.ಈಗ ಯಾವುದೇ ಜಾತಿಮತ ಪಂಥ ಬೇದ ಮಾಡದೇ ಮಳೆಗಾಗಿ ಸರ್ವರೂ ಪ್ರಾರ್ಥಿಸುವ ಅಗತ್ಯವಿದೆ.ಹಿಂದೆಂದಿಗೂ ಮಲೆನಾಡಿನಲ್ಲಿ ಕಾಣದ ಬಿಸಿ ವಾತಾವರಣ ಈ ವರ್ಷ ಮೈಗೆ ಸೋಕಿದೆ.ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಉರಿ ಸೆಕೆ,ಒಂದೇ ಸಮನೆ ಸುರಿಯುವ ಬೆವರಿನಿಂದ ಜನಜೀವನ ಕಂಗಾಲಾಗಿದೆ.ಸರ್ವಜನಃ ಸುಖಿನೋ ಭವಂತು ಎಂಬಂತೆ ದೇವರು ನಾಡಿಗೆ ಮಳೆಗಾಗಿ ವರ ಕರುಣಿಸಬೇಕಾಗಿದೆ.
“ಇಡೀ ದೇಶದಲ್ಲಿ ನೈಸರ್ಗಿಕ ನೀರಿಗೆ ಕೊರತೆಯಿಲ್ಲ.ದೇಶದಲ್ಲಿ ನೈಸರ್ಗಿಕ ನೀರನ್ನು ಸಮರ್ಪಕವಾಗಿ ಬಳಸಲು ಜನರು ಕಲಿಯಬೇಕು.ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೆಂದ್ರ ಹೆಗ್ಗಡೆಯವರು ಮಿನಿ ಅಣೆಕಟ್ಟು ಕಟ್ಟಿದ್ದಾರೆ.ಆ ಅಣೆಕಟ್ಟಿನಿಂದ ಹಲವು ಜನರಿಗೆ ಅನುಕೂಲವಾಗಿದೆ.ಈಗ ಆ ನೀರಿನ ಪ್ರಮಾಣ ಕಡಿಮೆಯಾಗಿದೆ.ಭಕ್ತಾದಿಗಳಿಗೆ ಧರ್ಮಸ್ಥಳಕ್ಕೆ ಹೋಗಿ ಬರೀ ಧರ್ಶನ ಮಾಡಲು ತೊಂದರೆಯಿಲ್ಲ.ಆದರೆ ಅಲ್ಲಿ ತಂಗಲು ನೀರಿನ ಅಭಾವ ಉಂಟಾಗಿರುವುದರಿಂದ ಸ್ಥಳೀಯರಿಗೆ ನೀರು ಬಳಸುವ ಆದ್ಯತೆ ನೀಡುವ ದೃಷ್ಟಿಯಿಂದ ಮಳೆ ಬರುವವರೆಗೂ ಭಕ್ತಾದಿಗಳಿಗೆ ಮೊದಲೇ ಸೂಚನೆ ನೀಡಿರುವುದು ಸ್ವಾಗತಾರ್ಹವಾಗಿದೆ.ಸರ್ಕಾರ ಕನಿಷ್ಟ ಮೂರು ಕಿ.ಮಿ.ಗಳ ಅಂತರದಲ್ಲಾದರೂ ಮಿನಿ ಅಣೆಕಟ್ಟು ಕಟ್ಟಿ ನೀರಿನ ಸಂಗ್ರಹ ಮಾಡುವ ಅಗತ್ಯವಿದೆ.ಮಾನವನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲಿನ ವಿಕೃತಿಯ ಕೆಲಸಗಳಿಂದ ಹವಾಮಾನ ಬದಲಾಗುತ್ತಿದೆ.ಮುಂದಿನ ಪೀಳಿಗೆಗೂ ಇದು ಮಾರಕವಾಗುವ ಸಾದ್ಯತೆಯಿದೆ.ಯಾವುದೇ ರಾಜಕಾರಣಿಗಳು ಮುಂದಾಲೋಚನೆ ಮಾಡದೇ ಇರುವುದೇ ಇದಕ್ಕೆ ಮೂಲ ಕಾರಣವಾಗಿದೆ.ಜನರು ಇದರಿಂದ ಎಚ್ಚೆತ್ತುಕೊಳ್ಳುವ ಅಗತ್ಯತೆಯಿದೆ’’ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ಆಧ್ಯಾತ್ಮಿಕ ಚಿಂತಕ ಚಿಪ್ರಗುತ್ತಿ ಪ್ರಶಾಂತ್ ತಿಳಿಸಿದ್ದಾರೆ.