ಮುಂಬೈ ದಾಳಿಯ ಉಗ್ರರು ನಿಮ್ಮ ದೇಶದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ : ಪಾಕ್ ನೆಲದಲ್ಲಿಯೇ ಜಾವೇದ್ ಅಖ್ತರ್ ಕಿಡಿ…

72
firstsuddi

ದೆಹಲಿ: ಪಾಕಿಸ್ತಾನದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕವಿ, ಲೇಖಕ,ಗೀತ ರಚನೆಕಾರ ಜಾವೇದ್ ಅಖ್ತರ್ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪಾಕ್ ನೆಲದಲ್ಲೇ ಖಡಕ್ ಉತ್ತರ ನೀಡಿದ್ದಾರೆ. 2008ರ ನವೆಂಬರ್ 26ರಂದು ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆಸಿದ ಉಗ್ರರು ಇನ್ನೂ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಖ್ಯಾತ ಉರ್ದು ಕವಿ ಫೈಜ್ ಅಹ್ಮದ್ ಅವರ ಸ್ಮರಣಾರ್ಥ ಲಾಹೋರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖ್ತರ್ ಪಾಲ್ಗೊಂಡಿದ್ದರು. ಈ ವೇಳೆ ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದೀರಿ, ಆದ್ರೆ ನೀವು ಹಿಂತಿರುಗುವಾಗ, ಇವರು ಒಳ್ಳೆಯ ಜನ ಅನ್ನಿಸುತ್ತಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಬ್ಬರನ್ನೊಬ್ಬರು ದೂಷಿಸಬಾರದು. ಅದರಿಂದ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಅಂದು ಮುಂಬೈ ಮೇಲೆ ದಾಳಿ ಹೇಗೆ ನಡೆಯಿತು ಎಂಬುದನ್ನ ನಾವು ನೋಡಿದ್ದೇವೆ. ಆದ್ರೆ ಅವರು ನಿಮ್ಮ ದೇಶದಲ್ಲಿ (ಪಾಕಿಸ್ತಾನ) ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಹೇಳಿದರು.

ಭಾರತವು ಪಾಕಿಸ್ತಾನಿ ಹಿರಿಯ ಗಾಯಕರಾದ ನುಸ್ರತ್ ಫತೇ ಅಲಿ ಖಾನ್ ಮತ್ತು ಮೆಹದಿ ಹಸನ್ ಗಾಗಿ ದೊಡ್ಡ ಕಾರ್ಯಕ್ರಮಗಳನ್ನ ಆಯೋಜಿಸಿತ್ತು. ಆದರೆ ಲತಾ ಮಂಗೇಶ್ಕರ್ ಅವರಿಗಾಗಿ ಪಾಕಿಸ್ತಾನ ಯಾವುದೇ ಕಾರ್ಯಕ್ರಮ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.