ನಾಗ್ಪುರ(ಮಹಾರಾಷ್ಟ್ರ): ಮುಂಬೈನಿಂದ ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ರಕ್ತ ವಾಂತಿ ಮಾಡಿಕೊಂಡರು. ಕೂಡಲೇ ವಿಮಾನವನ್ನು ನಾಗ್ಪುರದಲ್ಲಿ ತುರ್ತು ಲ್ಯಾಡಿಂಗ್ ಮಾಡಿ, ಬಳಿಕ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪ್ರಯಾಣಿಕನನ್ನು ದೇವಾನಂದ್ ತಿವಾರಿ ಎಂದು ಗುರುತಿಸಲಾಗಿದೆ. ಇವರು ಇಂಡಿಗೋ ಏರ್‌ಲೈನ್ಸ್ ವಿಮಾನ ಸಂಖ್ಯೆ 6E 5093 ರಲ್ಲಿ ಪ್ರಯಾಣಿಸುತ್ತಿದ್ದರು. 62 ವರ್ಷದ ಪ್ರಯಾಣಿಕ ದೇವಾನಂದ್ ತಿವಾರಿ ಅವರು ಸಿಕೆಡಿ ಮತ್ತು ಕ್ಷಯರೋಗದಿಂದ ಬಳಲುತ್ತಿದ್ದರು. ಪ್ರಯಾಣದ ಸಮಯದಲ್ಲಿ, ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ರಕ್ತದ ವಾಂತಿ ಮಾಡಿದರು. ಇದರಿಂದ ವಿಮಾನವನ್ನು ನಾಗ್ಪುರದಲ್ಲಿ ತುರ್ತು ಲ್ಯಾಡಿಂಗ್ ಮಾಡಲಾಯಿತು. ಪ್ರಯಾಣಿಕನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮುಂದಿನ ಪ್ರಕ್ರಿಯೆಗಾಗಿ ದೇವಾನಂದ್ ತಿವಾರಿ ಅವರ ಮೃತದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.










