ಮುದ್ದಾದ ಮಗುವಿನೊಂದಿಗೆ ಮನೆಗೆ ಹೊರಟ ರಾಮ್ ಚರಣ್-ಉಪಾಸನಾ ದಂಪತಿ…

64
firstsuddi

ಮೂರು ದಿನಗಳ ಹಿಂದೆಯಷ್ಟೇ ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಪತ್ನಿ ಮತ್ತು ಮಗುವನ್ನು ರಾಮ್ ಚರಣ್ ಮನೆಗೆ ಕರೆತಂದಿದ್ದಾರೆ.

ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ದಂಪತಿಯ ಮುದ್ದಾದ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ರಾಮ್ ಚರಣ್ ತೇಜ ಹಾಗೂ ಉಪಾಸನಾ ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮಗು ಜನನವಾಗಿದೆ. ಮಗುವಿನ ಆಗಮನದಿಂದ ಮೆಗಾ ಕುಟುಂಬ ತೀವ್ರ ಸಂತಸದಲ್ಲಿದೆ. ಆಸ್ಪತ್ರೆಯಿಂದ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ್ ಚರಣ್, ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಖುಷಿಯನ್ನು ಅವರ ಖುಷಿಯಾಗಿ ಸಂಭ್ರಮಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.