ಮೂಡನಂಬಿಕೆ ಮೊರೆ ಹೋದ ಬಿಜೆಪಿ ಶಾಸಕ – ವಾತಾವರಣ ಶುದ್ಧಿಗಾಗಿ ಹೋಮ,ಹವನ..!

200
firstsuddi

ಬೆಳಗಾವಿ : ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ಜೋರಾಗಿರುವ ಹಿನ್ನಲೆ ವಾತಾವರಣ ಶುದ್ಧಿ ಮಾಡುವ ಸಲುವಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಹೋಮ, ಹವನದ ಮೊರೆ ಹೋಗಿದ್ದಾರೆ.

ಲಾಕ್ ಡೌನ್ ಮಧ್ಯೆಯೂ ಶಾಸಕ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ, ದಕ್ಷಿಣ ಮತಕ್ಷೇತ್ರದ ಬಡಾವಣೆಗಳ ಮುಂದೆ ಅಗ್ನಿಕುಂಡ ಸ್ಥಾಪಿಸಿ ಆ ಅಗ್ನಿಕುಂಡದಲ್ಲಿ ಭೆರಣಿ, ಕರ್ಪೂರ, ತುಪ್ಪ, ಬೇವಿನ ಎಲೆ, ಗುಗ್ಗಳ, ಅಕ್ಕಿ, ಕವಡಿ ಧೂಪ ಹಾಗೂ ಲವಂಗ ಹಾಕಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿ ಗಲ್ಲಿ ಹಾಗೂ ಬಡಾವಣೆಯಲ್ಲಿ ಹೋಮ ಮಾಡಲಾಗುತ್ತಿದೆ.

ಹೋಮ ಹವನದಿಂದ ಕಲುಷಿತ ವಾತಾವರಣ ಶುದ್ಧಿಯಾಗಿ ಕೊರೊನಾ ಸೋಂಕು ನಿವಾರಣೆ ಆಗಲಿದೆ ಎಂಬ ನಂಬಿಕೆಯಿಂದ ಒಂದೇ ದಿನ 50 ಕಡೆಗಳಲ್ಲಿ ಹೋಮ ಮಾಡಲಾಗುತ್ತಿದೆ. ಇನ್ನೂ ಜೂನ್ 15ರ ವರೆಗೆ ಕ್ಷೇತ್ರದ ಎಲ್ಲ ಕಡೆಯಲ್ಲಿ ಹೋಮ ಮಾಡಲಾಗುವುದು ಎಂದು ಅಭಯ ಪಾಟೀಲ್ ಅವರು ತಿಳಿಸಿದ್ದಾರೆ.