ಮೂಡಿಗೆರೆ : ಅರಣ್ಯ ಇಲಾಖೆ ತೆರವುಗೊಳಿಸಿದ್ದ ರೈತ ಪ್ರವೀಣ್ ಅವರ ಜಮೀನಿಗೆ ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಭೇಟಿ…

317
firstsuddi

ಕೊಟ್ಟಿಗೆಹಾರ : ಕೂವೆ ಹೊಳೆಕೂಡಿಗೆಯ ಪ್ರವೀಣ್ ಅವರ ಜಮೀನಿಗೆ ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಭೇಟಿ ನೀಡಿದರು.
ಕಳೆದ ಕೆಲವು ದಿನಗಳ ಹಿಂದೆ ರೈತ ಪ್ರವೀಣ್ ಅವರ ಗುಡಿಸಲು ಹಾಗೂ ಕೃಷಿಭೂಮಿಯನ್ನು ಅರಣ್ಯ ಇಲಾಖೆಯವರು ತೆರವು ಮಾಡಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ರೈತರ ಮೇಲೆ ಪ್ರಕರಣ ದಾಖಲಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ರೈತರು ಹಾಗೂ ಬಡ ವರ್ಗದ ಪರವಾಗಿರುತ್ತೇವೆ. ರೈತರ ಮೇಲೆ ಪ್ರಕರಣ ದಾಖಲಿಸಿರುವ ಕ್ರಮ ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ಕೆ.ಸಿ ರತನ್, ಬಿಜೆಪಿ ಮುಖಂಡರಾದ ಹಳಸೆ ಶಿವಣ್ಣ, ಬಿ.ಎಂ ಭರತ್, ಶಶಿಧರ್, ವಿಜೇಂದ್ರ, ಮರ್ಕಲ್ ಲೋಕೇಶ್, ಕಲ್ಲೇಶ್, ಪರೀಕ್ಷಿತ್ ಜಾವಳಿ, ಬಾಳೂರು ಮಂಜು, ರಘುಪತಿ, ಕೃಷ್ಣ ಜಾವಳಿ, ನಂದನ್, ದಿನಕ ಬಾಬು, ಗೌತಮ್, ಅಶೋಕ್, ಶಾಮಣ್ಣ ಬಣಕಲ್, ಉದಯ್, ರೋಹಿತ್, ಸುಂದರೇಶ್, ಮಂಜು, ಸುರೇಶ್, ಅನೂಪ್, ಅಶೋಖ್, ರಮೇಶ್,ಸುಮಿತ್ರಾ, ವಿಜೇಂದ್ರ, ನವೀನ್ ಹಾವಳಿ ಮುಂತಾದವರು ಇದ್ದರು.