ಮೂಡಿಗೆರೆ : ಅರಣ್ಯಕ್ಕೆ ಬಿಟ್ಟಿದ್ದ ಪುಂಡ ಕೋತಿ ಮತ್ತೆ ಪ್ರತ್ಯಕ್ಷ…

132
firstsuddi

ಕೊಟ್ಟಿಗೆಹಾರ : ಕೆಲ ದಿನಗಳ ಹಿಂದೆ ಅರಣ್ಯ ಸಿಬ್ಬಂದಿಗಳು ಅರಣ್ಯಕ್ಕೆ ಬಿಟ್ಟಿದ್ದ ಪುಂಡ ವಾನರವೊಂದು ಮತ್ತೆ ಕೊಟ್ಟಿಗೆಹಾರದಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಕೊಟ್ಟಿಗೆಹಾರದಲ್ಲಿ ಮಂಗವೊಂದು ಕಾಣಿಸಿಕೊಂಡು ಕೆಲವರಿಗೆ ಕಚ್ಚಿ ಗಾಯ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಸತತ ಕಾರ್ಯಚರಣೆ ನಡೆಸಿ ಅರವಳಿಕೆ ನೀಡುವ ಮೂಲಕ ವಾನರವನ್ನು ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದರು. ಆದರೆ ನಿನ್ನೆ ರಾತ್ರಿ ಚಾರ್ಮಾಡಿ ಘಾಟ್ ಅರಣ್ಯದ ಮಾರ್ಗವಾಗಿ ಕೊಟ್ಟಿಗೆಹಾರಕ್ಕೆ ಲಾರಿಯೊಂದನ್ನು ಹತ್ತಿಕೊಂಡು ವಾನರ ಮತ್ತೆ ಕೊಟ್ಟಿಗೆಹಾರದಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಇಂದು ಸಂಜೆಯವರೆಗೆ ಅರಣ್ಯ ಸಿಬ್ಬಂದಿಗಳು, ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದರೂ ಕೂಡ ವಾನರನನ್ನು ಹಿಡಿಯಲು ಸಾಧ್ಯವಾಗಿಲ್ಲ. ವಾನರನನ್ನು ಹಿಡಿಯಲು ಕಾರ್ಯಚರಣೆ ಮುಂದುವರಿದಿದೆ.