ಮೂಡಿಗೆರೆ : ಕೊರೊನಾ ಭೀತಿ-ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ 3 ಸಾವಿರ ಮಾಸ್ಕ್ ತಯಾರಿ…

388
firstsuddi

ಮೂಡಿಗೆರೆ : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಎಲ್ಲೆಡೆ ಮಾಸ್ಕ್ ಅಭಾವ ಕಂಡು ಬಂದ ಹಿನ್ನಲೆಯಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ 3 ಸಾವಿರ ಮಾಸ್ಕ್‍ಗಳನ್ನು ತಯಾರಿಸಿ ತಾಲ್ಲೂಕು ಪಂಚಾಯಿತಿಗೆ ಕಳುಹಿಸಿಕೊಡಲಾಯಿತು.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಅವರು, 5 ಸಾವಿರ ಮಾಸ್ಕ್ ತಯಾರಿಸುವ ಗುರಿ ಹೊಂದಲಾಗಿದ್ದು ಈಗಾಗಲೇ 3 ಸಾವಿರ ಮಾಸ್ಕ್‍ಗಳನ್ನು ತಯಾರಿಸಲಾಗಿದೆ. ಬಣಕಲ್‍ನ 10 ಕ್ಕೂ ಹೆಚ್ಚು ಟೈಲರ್‍ಗಳು ಮಾಸ್ಕ್ ತಯಾರಿಯಲ್ಲಿ ತೊಡಗಿದ್ದಾರೆ. ಅವರಿಗೆ ಮಾಸ್ಕ್ ತಯಾರಿಸಲು ಬೇಕಾದ ಕಚ್ಚಾ ವಸ್ತು ಹಾಗೂ ಹೊಲಿಗೆ ವೆಚ್ಚವನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಗುತ್ತಿದೆ ಎಂದರು. ಈ ವೇಳೆ ಪಿಡಿಓ ಕೃಷ್ಣಪ್ಪ, ಟೈಲರ್ ಜಗದೀಶ್ ಇದ್ದರು.