ಮೂಡಿಗೆರೆ : ಕೊಲ್ಲಿಬೈಲು ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ – ಚಿರತೆ ಸಾವು…

1258
firstsuddi

ಮೂಡಿಗೆರೆ : ಅಪರಿಚಿತ ವಾಹನ ಚಿರತೆಗೆ ಡಿಕ್ಕಿ ಹೊಡೆದು ಚಿರತೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಿಳಗುಳ ಸಮೀಪದ ಕೊಲ್ಲಿಬೈಲು ಗ್ರಾಮದ ಬಳಿ ನಡೆದಿದ್ದು, ತಡರಾತ್ರಿ ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದು, ನಿನ್ನೆ ಬಿಳಗುಳ ಗ್ರಾಮದ ವಿಜಯ ಬ್ಯಾಂಕ್ ಸಮೀಪ ಚಿರತೆ ಪ್ರತ್ಯಕ್ಷವಾಗಿದ್ದು, ಮೃತ ಚಿರತೆ ನಿನ್ನೆ ಪ್ರತ್ಯಕ್ಷವಾಗಿದ್ದ ಚಿರತೆ ಮರಿ ಇರಬಹುದು ಎನ್ನಲಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.