ಮೂಡಿಗೆರೆ : ಮಲೆನಾಡು ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಿನ್ನೆ ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ಹೇಮಾವತಿಯ ಉಪಾನದಿಯಾದ ಸೋಮಾವತಿ ನದಿಯ ನೀರಿನ ಹರಿವಿನ ಮಟ್ಟ ಹೆಚ್ಚಾಗಿದ್ದು, ಕೊಟ್ಟಿಗೆಹಾರ ಸಮೀಪ ನದಿಯಲ್ಲಿ ಇದ್ದ ಮೀನುಗಳು ಗದ್ದೆಯ ಬಯಲಿನಲ್ಲಿ ತೇಲಾಡುತ್ತಿದ್ದ ಮಳಲಿ ಮೀನು, ಪಟ್ಟಲಿ ಮೀನು(ಅರ್ಜು), ಹಳ್ಳದ ಕೊರೆಮೀನು, ಮುಳ್ಳು ಸೀಗಡಿ ಮೀನನ್ನು ಕಂಡ ಸ್ಥಳೀಯರು ಗದ್ದೆಗೆ ಹತ್ತಿರುವ ಮೀನನ್ನು ಯುವಕರು ಸಂಭ್ರಮದಿಂದ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಹಿಡಿದು ಎಂಜಾಯ್ ಮಾಡಿದ್ದಾರೆ.










