ಮೂಡಿಗೆರೆ: ಗುಡ್ಡದ ಮೇಲಿಂದ ಮನೆಯ ಮೇಲೆ ಜಿಗಿದ ಜಿಂಕೆ .

810

ಮೂಡಿಗೆರೆ : ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆಯೊಂದು ಗುಡ್ಡದ ಮೇಲಿಂದ ಮನೆ ಮೇಲೆ ಬಿದ್ದಿರೋ ಘಟನೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗುಡ್ಡದ ಮೇಲಿದ್ದ ಜಿಂಕೆಯನ್ನ ಕಂಡ ನಾಯಿಗಳು ದಾಳಿ ಮುಂದಾಗಿವೆ. ಈ ವೇಳೆ ಭಯದಿಂದ ಓಡಿದ ಜಿಂಕೆ ಸುಮಾರು 10-15 ಅಡಿ ಎತ್ತರದಿಂದ ಮನೆ ಮೇಲೆ ಜಿಗಿದಿದೆ. ಈ ವೇಳೆ, ಮನೆಯ ಹೆಂಚುಗಳು  ಮುರಿದು, ರೂಪಿಂಗ್‍ನ ರೀಪರ್‍ಗಳು ಕೂಡ ಮುರಿದು ಅಡಿಗೆ ಮನೆಯೊಳಗೆ ಬಿದ್ದಿದೆ. ಅಡುಗೆ ಮನೆಯಲ್ಲಿದ್ದ ತಂದೆ ಮಗಳು ಶ್ರೀನಿವಾಸ್ ಹಾಗೂ ಅನೂಪ್‍ಗೆ ಗಾಯವಾಗಿದು ಇಬ್ಬರನ್ನೂ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಂಕೆಗೂ ಕೂಡ ಏನೂ ಆಗದೆ ಬಿದ್ದ ಕೂಡಲೇ ಎದ್ದು ಓಡಿ ಹೋಗಿದು.ಸ್ಥಳಕ್ಕೆ ಮೂಡಿಗೆರೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.