ಮೂಡಿಗೆರೆ ತಾಲೂಕು ಹೋಂ ಸ್ಟೇ ಮಾಲೀಕರ ಸಂಘದ ಅಧ್ಯಕ್ಷರಾಗಿ ಗುತ್ತಿ ಜಗದೀಶ್ ಆಯ್ಕೆ.

69

ಮೂಡಿಗೆರೆ: ತಾಲೂಕು ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷರಾಗಿ ಜಿಎಂ ಜಗದೀಶ್( ಗುತ್ತಿ ಜಗಣ್ಣ ) ಅವಿರೋಧ ಆಯ್ಕೆಯಾಗಿದ್ದಾರೆ.

ಇಂದು ಕ್ಯಾಪ್ರಿ ರೆಟ್ರೀಟ್ ನಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಂಜನ್ ಅಜಿತ್ ಕುಮಾರ್ ಮತ್ತು ನೇಮ್ ರಾಜ್( ಜಪ್ಪತ್ ಕಲ್ಲು ರೆಸಾರ್ಟ್ಸ್ ),ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಖಜಾಂಚಿ ಬಾಳೆಹಳ್ಳಿ ಸತೀಶ್, ಸಹ ಕಾರ್ಯದರ್ಶಿಯಾಗಿ ದೀಕ್ಷಿತ್ ಚಿಪ್ಪರ್ಗುತ್ತಿ, ನಿರ್ದೇಶಕರಾಗಿ, ಕಾರ್ತಿಕ್ ಪಟದೂರು, ವಿಕಾಸ್ ಕೆ ವಿ, ಸಂಜಯ್ ಕೊಟ್ಟಿಗೆಹಾರ, ಪವಿತ್ರ ಎನ್ ಸಿ, ಪ್ರಶಾಂತ್ ಬಿ. ಆರ್. ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಎಂ. ಜಗದೀಶ್ ತಾಲೂಕಿನಲ್ಲಿರುವ ಎಲ್ಲಾ ಹೋಂಸ್ಟೇ ಸಂಘದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ನೊಂದಣಿ ಆಗದೆ ಹೋಂ ಸ್ಟೇ ನಡೆಸುತ್ತಿರುವರ ಬಗ್ಗೆ ಪತ್ತೆ ಹಚ್ಚಿ ದೂರು ನೀಡಲಾಗುವುದು ಅನಧಿಕೃತ ಹೋಂಸ್ಟೇಗಳು ಯಾವುದಾದರೂ ಇದ್ದಲ್ಲಿ ಕೂಡಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದರು.