ಮೂಡಿಗೆರೆ :ದತ್ತಜಯಂತಿ ಹಿನ್ನಲೆ: ಕೊಟ್ಟಿಗೆಹಾರದಲ್ಲಿ ವಾಹನ ತಪಾಸಣೆ ನಡೆಸಿದ ಬಣಕಲ್ ಪೋಲಿಸರು…

251

ಕೊಟ್ಟಿಗೆಹಾರ:ದತ್ತಜಯಂತಿ ಹಿನ್ನಲೆಯಲ್ಲಿ ಸೂಕ್ಷ್ಮಗಡಿ ಭಾಗವಾದ ಕೊಟ್ಟಿಗೆಹಾರದಲ್ಲಿ ಪೋಲಿಸರು ವಾಹನ ತಪಾಸಣೆ ನಡೆಸಿದರು.
ಮಂಗಳೂರು ಕಡೆಯಿಂದ ಚಿಕ್ಕಮಗಳೂರಿಗೆ ಬರುವ ಮತ್ತು ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನದ ಸಂಖ್ಯೆ ಹಾಗೂ ಚಾಲಕರ ವಿಳಾಸವನ್ನು ಪೋಲಿಸರು ದಾಖಲಿಸಿಕೊಂಡರು.
ಬಣಕಲ್ ಠಾಣೆ ಪಿಎಸ್‍ಐ ಶ್ರೀನಾಥ್ ರೆಡ್ಡಿ, ಎಎಸ್‍ಐ ಶಶಿ, ಹಾಗೂ ಪೋಲಿಸ್ ಸಿಬ್ಬಂದಿಗಳು ಇದ್ದರು.