ಮೂಡಿಗೆರೆ: ತಾಲ್ಲೂಕಿನಲ್ಲಿ ಲೋಕಸಭೆಗೆ ನಡೆದ ಮತದಾನ ಬಹುತೇಕ ಶಾಂತಿಯುತವಾಗಿದೆ ಆದರೆ ಪಟ್ಟಣದ ಹಲವು ಮತಗಟ್ಟೆಗಳಲ್ಲಿ ಶೇಕಡವಾರು ಮತದಾನ ಹಿಂದಿನ ವಿಧಾನ ಸಭಾ ಚುನಾವಣೆ ಹಾಗೂ ಗ್ರಾಮ ಪಂಚಾಯಿತಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಲೆಕ್ಕಾಚಾರಕ್ಕೆ ಇಳಿದರೆ ಲೋಕ ಸಮರದಲ್ಲಿ ಇಂದು ಚಲಾವಣೆಯಾದ ಮತದಾನ ಶೇಕಡವಾರು ಕಡಿಮೆಯಾಗಿರುವ ಕುರಿತು ವರದಿಯಾಗಿದೆ ಮತ್ತು ಹಾಲಿ ಸಂಸದರ ಆದರ್ಶ ಗ್ರಾಮವೆಂದು ಗುರುತಿಸಲ್ಪಟ್ಟ ದಾರದಹಳ್ಳಿಯ ಬಹುತೇಕ ಮತಗಟ್ಟೆಗಳಲ್ಲಿ ಶೇಕಡವಾರು ಮತದಾನದಲ್ಲಿ ಏರಿಕೆಯನ್ನು ಕಂಡಿದ್ದು ಇಲ್ಲಿನ ವಿವಿಧ ರಾಜಕೀಯ ನೇತಾರರು ಮತದಾನದ ಏರಿಕೆಯನ್ನು ಕಂಡು ಸಂಭ್ರಮದಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಲೋಕಸಭೆಯ ಮೊದಲನೇ ಹಂತದ ಮತದಾನ ತಾಲ್ಲೂಕಿನ ವಿವಿದೆಡೆಗಳಲ್ಲಿ ಬಹುತೇಕ ಶಾಂತಿಯುತವಾಗಿದ್ದು ಅದರಲ್ಲಿ ಅಂಗವಿಕಲರು ಹಾಗೂ ಮಾನಸಿಕ ಸ್ಥೈರ್ಯವನ್ನು ಕಳೆದುಕೊಂಡ ಕೆಲವರು ತಮ್ಮ ಮತವನ್ನು ಚಲಾಹಿಸಿದ್ದು ಪ್ರಜಾಪ್ರಭುತ್ವದ ಶಕ್ತಿಯನ್ನು ಎಚ್ಚಿಸಿದ್ದು ಮತು ಇದರಿಂದ ತಮ್ಮ ಮೂಲಭೂತ ಹಕ್ಕನ್ನು ಚಲಾಹಿಸಲು ಹಿಂದೇಟು ಹಾಕುತ್ತಿರುವವರಿಗೆ ಇದೊಂದು ಮಾದರಿ ಪಾಠವಾಗಿದೆ.
ಈ ಹಿಂದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಂತಹ ಶೋಭಾ ಕರಂದ್ಲಾಜೆಯವರಲ್ಲಿ ಮೊದ ಮೊದಲು ಅಸಮಾಧಾನದ ಹೊಗೆ ಸ್ವ ಪಕ್ಷದ ಮತ್ತು ಇಲ್ಲಿನ ಮತದಾರರಲ್ಲಿ ಕಾಣಿಸಿಕೊಂಡಿದ್ದಾದರೂ ಇಂದು ನಡೆದ ಚುನಾವಣೆ ಇವೆಲ್ಲಕ್ಕೂ ಮೀರಿ ಕೇವಲ ರಾಷ್ಟ್ರದ ಪ್ರಧಾನಿಯನ್ನು ಆಯ್ಕೆ ಮಾಡುವ ಸಲುವಾಗಿ ಅಭ್ಯರ್ಥಿಯ ಬಗ್ಗೆ ಯಾವುದೇ ತರಹದ ಲೋಪವಿದ್ದರೂ ಇವೆಲ್ಲವನ್ನು ಸಹಿಸಿ ಬಿ.ಜೆ.ಪಿ ಕಾರ್ಯಕರ್ತರು ಒಕ್ಕೊರಲಿನಿಂದ ಕೆಲಸ ಮಾಡಿದ್ದು ಅದಕ್ಕೆ ಉದಾಹರಣೆ ಎಂಬಂತೆ ಸಂಸದರ ಆದರ್ಶ ಗ್ರಾಮ ಎನಿಸಿಕೊಂಡಿರುವ ದಾರದಹಳ್ಳಿಯ ಗಾಂಧಿಘರ್ ಮತಗಟ್ಟೆಯ ಹೊರಗಡೆ ಇದ್ದಂತಹ ಬಿ.ಜೆ.ಪಿ ಕಾರ್ಯಕರ್ತರು ಮತದಾನ ಮುಗಿದ ಕೂಡಲೇ ಎಲ್ಲಾ ಕಾರ್ಯಕರ್ತರೂ ಸೇರಿ ಎಣಿಕೆಗೂ ಮೊದಲೇ ವಿಜಯದ ಸಂಕೇತವನ್ನು ಸೂಚಿಸಿ ಸಂಭ್ರಮಿಸಿ ವಿಜಯ ನಮಗೆ ಎಂಬಂತಹ ಸಂಭ್ರಮದಲ್ಲಿದ್ದು ಅದೇ ರೀತಿ ನಮಗೆ ಈಗಾಗಲೇ ಸಂಭ್ರಮದ ಅಗತ್ಯವಿಲ್ಲ ಎಣಿಕೆಯ ನಂತರ ನಾವು ಸಂಭ್ರ್ರಮಿಸುತ್ತೇವೆ ಎಂಬಂತಹ ಮೌನದ ಉತ್ತರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಕಾರ್ಯಕರ್ತರು ಇದ್ದು ಏನೆ ಆದರು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದ ಒಳಗೆ ಇನ್ನು ಒಂದು ತಿಂಗಳು ಇರುವುದರಿಂದ ಮತದಾರ ಪ್ರಭು ಯಾರ ಕಡೆ ಒಲಿದಿದ್ದಾನೋ ಎಂದು ಕಾದು ನೋಡಬೇಕಾಗಿದೆ.










