ಮೂಡಿಗೆರೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಳಸ ಪಿಯು ಕಾಲೇಜಿಗೆ ಶೇ.91 ಫಲಿತಾಂಶ…

255
firstsuddi

ಮೂಡಿಗೆರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಳಸದ ಪದವಿಪೂರ್ವ ಕಾಲೇಜಿಗೆ ಶೇ.91 ರಷ್ಟು ಫಲಿತಾಂಶ ದಾಖಲಿಸಿದೆ. ಒಟ್ಟು 125 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು 114 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.95 ರಷ್ಟು ಅಂಕ ಗಳಿಸುವ ಮೂಲಕ ಸುರಕ್ಷಾ ಜೈನ್ ಅವರು ಅಗ್ರಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾದಲ್ಲಿ 56 ವಿದ್ಯಾರ್ಥಿಗಳ ಪೈಕಿ 49 ಮಂದಿ ಉತ್ತೀರ್ಣರಾಗಿದ್ದು. 540 ಅಂಕ ಗಳಿಸಿರುವ ಸುರಭಿ ಜೈನ್ ಹಾಗೂ 522 ಅಂಕ ಗಳಿಸಿರುವ ಮಾನಸಾ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಕಾವ್ಯಾ.ಬಿ ಶೇ.92, ಬಾಲರಾಜ್ ನಾಯಕ್ ಶೇ.91, ಅನನ್ಯಾ ಶೇ.90 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ 64 ವಿದ್ಯಾರ್ಥಿಗಳ ಪೈಕಿ 58 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಲ್ಲಾ 7 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 528 ಅಂಕ ಪಡೆದ ಅನುಷಾ ಮೊದಲ ಸ್ಥಾನ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್ ತಿಳಿಸಿದ್ದಾರೆ.
ಮೂಡಿಗೆರೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ.74.05 ಫಲಿತಾಂಶ : ಸರ್ಕಾರಿ ಪಟ್ಟಣದ ಸಂತೆ ಮೈದಾನದ ಬಳಿ ಇರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.74.05ರಷ್ಟು ಫಲಿತಾಂಶ ಬಂದಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರದಿದ್ದ 131 ವಿದ್ಯಾರ್ಥಿಗಳಲ್ಲಿ 97 ವಿದ್ಯಾರ್ಥಿಗಳು ಉತತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಶೇ.78.72, ವಾಣಿಜ್ಯ ವಿಭಾಗದಲ್ಲಿ ಶೇ.80.36 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.82.14 ಫಲಿತಾಂಶ ಲಭ್ಯವಾಗಿದೆ. ಕಾಲೇಜಿನ ಸುವiನ್, ರಕ್ಷಿತ್, ಬಿ.ಎ.ಚಂದನ್, ಬಿ.ಎನ್.ಶರಣ್, ಎಂ.ಪಿ.ಮೇಘನಾ, ಪ್ರಬೋಧಿನಿ, ಪ್ರೀತಮ್ ಅವರುಗಳು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 67 ಮಂದಿ ಪ್ರಥಮ, 25 ಮಂದಿ ದ್ವಿತೀಯ ಹಾಗೂ 3 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲೆ ಮಂಜುಳಾ ಅವರು ತಿಳಿಸಿದ್ದಾರೆ.
ಮೂಡಿಗೆರೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.71.59 ಫಲಿತಾಂಶ : ಪಟ್ಟಣದ ದೇವಿರಮ್ಮ ದೇವಸ್ಥಾನ ಬಳಿ ಇರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ.71.59 ರಷ್ಟು ಫಲಿತಾಂಶ ಲಭ್ಯವಾಗಿದೆ. ಈ ಬಾರಿ ಪರೀಕ್ಷೆ ಎದುರಿಸಿದ್ದ 88 ಮಂದಿ ವಿದ್ಯಾರ್ಥಿನಿಯರಲ್ಲಿ 63 ಮಂದಿ ಉತ್ತೀರ್ಣರಾಗಿದ್ದು, ಅತ್ಯುನ್ನತ ದರ್ಜೆಯಲ್ಲಿ 5 ಮಂದಿ, ಪ್ರಥಮ ದರ್ಜೆಯಲ್ಲಿ 34 ಮಂದಿ, ದ್ವಿತೀಯ ದರ್ಜೆಯಲ್ಲಿ 18 ಮಂದಿ ಹಾಗೂ ತೃತೀಯ ದರ್ಜೆಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದಾರೆ. ಚಿತ್ರಶ್ರೀ, ನವಮಿ, ಸೃಷ್ಟಿ, ನೇಸರ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.