ಮೂಡಿಗೆರೆ : ಪಾಳು ಬಿದ್ದ ಬಸ್ ನಿಲ್ದಾಣ – ಹೊಸ ಬಸ್ ನಿಲ್ದಾಣಕ್ಕೆ ಕೊಲ್ಲಿಬೈಲು ಗ್ರಾಮಸ್ಥರ ಆಗ್ರಹ…

514
firstsuddi

ಮೂಡಿಗೆರೆ : ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೊಲ್ಲಿಬೈಲು ಗ್ರಾಮದ ಬಸ್ ನಿಲ್ದಾಣವು ಪಾಳು ಬಿದ್ದಿದ್ದು, ಹೊಸ ಬಸ್ ನಿಲ್ದಾಣ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗ್ರಾಮದ ತಾರೂ ಪೂಜಾರಿ ಅವರು, ಈಗಿರುವ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಬೇಕೆಂದು ಹೇಳಿದರು. ಹಾಗೆಯೇ ಈಗಿರುವ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಪುಂಡರು ಮಧ್ಯಪಾನ, ಧೂಮಪಾನ ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಸುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.