ಹೊಟ್ಟೆ ನೋವಿನ ಔಷಧಿ ಎಂದು ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ ವೃದ್ಧ ಸಾವು…

176
firstsuddi

ರಾಯಚೂರು : ಹೊಟ್ಟೆ ನೋವಿನ ಔಷಧಿ ಎಂದು ತಿಳಿದು ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ ವೃದ್ಧ ಮೃತಪಟ್ಟಿರುವ ಘಟನೆ ಜಿಲ್ಲೆಯ ನೆಲಹಾಳದಲ್ಲಿ ನಡೆದಿದೆ. ಖಾಸಿಮ್ ಸಾಬ್(65) ಮೃತ ವೃದ್ಧ ಎಂದು ಗುರುತಿಸಲಾಗಿದೆ. ಜುಲೈ 26 ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧ ಮನೆಯಲ್ಲಿ ತಂದಿಟ್ಟಿದ್ದ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಹೊಟ್ಟೆ ನೋವಿನ ಔಷಧಿ ಎಂದು ಭಾವಿಸಿ ಕುಡಿದಿದ್ದಾರೆ. ಬಳಿಕ ಕೂಡಲೇ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.