ಮೂಡಿಗೆರೆ : ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ ನ 5 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ರಕ್ತದಾನ ಶಿಬಿರ.

303
firstsuddi

ಮೂಡಿಗೆರೆ : ಮೂಡಿಗೆರೆ ಪಟ್ಟಣದಲ್ಲಿ ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ ನ 5 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಹೋಲಿಕ್ರಾಸ್ ರಕ್ತ ನಿಧಿ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.
ಪಟ್ಟಣದ ಮಲೆನಾಡು ವಾಹನ ಚಾಲಕರ ಸಂಘದ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಾನಪದ ಪರಿಷತ್‍ನ ಅಧ್ಯಕ್ಷ ಬಕ್ಕಿ ಮಂಜುನಾಥ್ ಅವರು ರಕ್ತ ದಾನ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಶಿಬಿರದಲ್ಲಿ ವಕೀಲ ಮೋಹಿತ್, ಮಂಜುನಾಥ್, ಸಾಹಿತಿ ಚಾರ್ಮಾಡಿಯ ನಲ್ಮಿಡಿ, ಕಾರ್ಮಿಕ ಸಂಘದ ಅಧ್ಯಕ್ಷ ರಾಮಚಂದ್ರ ಒಡೆಯರ್, ಪ.ಪಂ. ಸದಸ್ಯ ಕೆ.ವೆಂಕಟೇಶ್, ರಾಮಯ್ಯ, ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ ಸಂಸ್ಥಾಪಕ ಬಿಳಗುಳ ಅಲ್ತಾಫ್, ಉಪಾಧ್ಯಕ್ಷ ಸೈಫ್ ಕಂಳಂಜಿ ಬೈಲ್, ಸದಸ್ಯರುಗಳಾದ ಫಲ್ಗುಣಿ ದಿನೇಶ್, ಆವತಿ ಬಸವರಾಜ್, ಅಶ್ವಾಕ್ ಶಾಹ್, ಮುಬಾರಕ್, ಶಹಿನ್, ಕೃಷ್ಣಾಪುರದ ರೆಹಮಾನ್, ನಾಝೀಂ ಹಾಗೂ ಮಲೆನಾಡು ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.