ಮೂಡಿಗೆರೆ : ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಅಗತ್ಯವಿದೆ : ನವೀನ್.

211
firstsuddi

ಕೊಟ್ಟಿಗೆಹಾರ : ಮಹಿಳೆಯರಿಗೆ ಶೇ 50 ಮೀಸಲಾತಿ ನೀಡುವ ಮೂಲಕ ಮಹಿಳೆಯರ ರಾಜಕೀಯ ವಲಯದಲ್ಲಿನ ಸಶಕ್ತೀಕರಣಕ್ಕೆ ಹೊಸ ಆಯಾಮ ದೊರಕಿದೆ ಎಂದು ದಿ ಹಂಗರ್ ಪ್ರಾಜೆಕ್ಟ್ ಮತ್ತು ವಿಕಸನ ಸಂಸ್ಥೆಯ ಮೂಡಿಗೆರೆ ಕ್ಷೇತ್ರ ಸಂಯೋಜಕ ನವೀನ್ ಹೇಳಿದರು.
ದಿ ಹಂಗರ್ ಪ್ರಾಜೆಕ್ಟ್ ಮತ್ತು ವಿಕಸನ ಸಂಸ್ಥೆಯ ವತಿಯಿಂದ ಜಾವಳಿಯಲ್ಲಿ ನಡೆದ ಸಂಭಾವ್ಯ ನಾಯಕತ್ವ ಕಾರ್ಯಾಗಾರದಲ್ಲಿ ಮಾತನಾಡಿದರು. ಮಹಿಳಾ ಮೀಸಲಾತಿಯ ಪ್ರಾಮುಖ್ಯತೆಯ ಕುರಿತು ಮಹಿಳೆಯರು ಅರಿವನ್ನು ಹೆಚ್ಚಿಸಿಕೊಳ್ಳಬೇಕಿದೆ. ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಯಾವ ಅಭಿವೃದ್ದಿ ಸಾಧ್ಯವಿಲ್ಲ. ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಅತಿ ಅವಶ್ಯ ಎಂದರು.
ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಅಗತ್ಯವಿದೆ. ಮತದಾರರು, ಅಭ್ಯರ್ಥಿಗಳು, ಚಳುವಳಿಗಾರರು, ಚುನಾವಣಾ ಏಜೆಂಟ್, ಜವಾಬ್ದಾರಿಯುತ ನಾಗರಿಕರ ರೂಪದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಜಾವಳಿ ಗ್ರಾಮಸ್ಥರಾದ ಕುಸುಮ, ಸುನೀತಾ, ಸುಧಾ, ಗೀತಾ, ರಾಧಾ ಮುಂತಾದವರು ಇದ್ದರು.