ಮೂಡಿಗೆರೆ : ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಪ್ರವಾಸಿಗರು…

108
firstsuddi

ಕೊಟ್ಟಿಗೆಹಾರ : ಇಂದಿನಿಂದ ಲಾಕ್ ಡೌನ್ ತೆರವಾದ ಹಿನ್ನಲೆಯಲ್ಲಿ ದೇವರಮನೆ, ಚಾರ್ಮಾಡಿ ಘಾಟ್ ಸೇರಿದಂತೆ ಪ್ರವಾಸಿತಾಣಗಳು ಪ್ರವಾಸಿಗರಿಂದ ಗಿಜಿಗುಡುತ್ತಿತ್ತು.

ದೇವರಮನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರ ನೆರೆದಿದ್ದು ಸಾಮಾಜಿಕ ಅಂತರವಿಲ್ಲದೇ ಮಾಸ್ಕ್ ಧರಿಸದೇ ತಿರುಗಾಡುತ್ತಿದ್ದುದ್ದು ಕಂಡು ಬಂತು. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಚಾರ್ಮಾಡಿ ಘಾಟ್ ನಲ್ಲಿ ಕೆಲ ಪ್ರವಾಸಿಗರು ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡು ಸೆಲ್ಪಿ ತೆಗೆಯುವುದರಲ್ಲಿ ನಿರತರಾಗಿದ್ದರು. ಹಲವಾರು ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಕೊಟ್ಟಿಗೆಹಾರ ಪ್ರವಾಸಿ ವಾಹನಗಳಿಂದ ತುಂಬಿತ್ತು.