ಮೂಡಿಗೆರೆ : ಬಣಕಲ್ ಹಾಗೂ ಬಾಳೂರು ಪೋಲಿಸ್ ಠಾಣೆಯಲ್ಲಿ ಸಂಭ್ರಮದ ಆಯುಧಪೂಜೆ ಆಚರಣೆ…

118
firstsuddi

ಕೊಟ್ಟಿಗೆಹಾರ : ಬಣಕಲ್ ಹಾಗೂ ಬಾಳೂರು ಪೋಲಿಸ್ ಠಾಣೆಯಲ್ಲಿ ಆಯುಧಪೂಜೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಪೋಲಿಸ್ ಠಾಣೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬಂದೂಕುಗಳಿಗೆ ಹೂವಿನಿಂದ ಸಿಂಗರಿಸಲಾಗಿತ್ತು. ಠಾಣೆಯ ವಾಹನಗಳಿಗೆ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು.
ಬಾಳೂರು ಪೋಲಿಸ್ ಠಾಣೆಯ ಸಿಬ್ಬಂದಿಗಳು ಸಾಂಪ್ರಾದಾಯಿಕ ಉಡುಪು ತೊಟ್ಟು ಪೂಜೆಯಲ್ಲಿ ಪಾಲ್ಗೊಂಡರು. ಬಾಳೂರು ಪೋಲಿಸ್ ಠಾಣೆಯ ಪಿಎಸ್‍ಐ ಮೂರ್ತಿ, ಬಣಕಲ್ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀನಾಥ್ ರೆಡ್ಡಿ ಹಾಗೂ ಸಿಬ್ಬಂದಿಗಳು ಇದ್ದರು.