ಮೂಡಿಗೆರೆ: ಬಾಂಗ್ಲಾ ವಲಸಿಗರ  ವಿರುದ್ಧ ಹೋರಾಟಕ್ಕೆ ವಿವಿಧ ಸಂಘಟನೆಗಳ ಸಭೆ. 

36
 ಮೂಡಿಗೆರೆ : ಇಲ್ಲಿನ ಜೆಸಿ ಭವನದಲ್ಲಿ ಸೋಮವಾರ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮತ್ತು ಹೋರಾಟಗಾರರನ್ನು  ರೂಪಿಸುವ ಕುರಿತು ಚರ್ಚಿಸಲು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
 ವಿಶ್ವ ಹಿಂದು ಪರಿಷತ್ ತಾಲ್ಲೂಕು ಅಧ್ಯಕ್ಷ ಗುತ್ತಿ ಸುದೇವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಮೊದಲ ಹಂತವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿಗಳನ್ನು ಭೇಟಿ ಮಾಡಿ  ಮೂಡಿಗೆರೆ ತಾಲೂಕಿನ ಅನಾದಿಕೃತ ಬಾಂಗ್ಲಾ ವಲಸಿಗರ ತಡೆಗೆ ಒತ್ತಾಯಿಸಿ  ಮಾಡಬೇಕಾದ ಹೋರಾಟಗಳ ಕುರಿತು ಚರ್ಚಿಸಲಾಯಿತು.
ಸುದೇವ್  ಅವರು ಮಾತನಾಡಿ ತಾಲ್ಲೂಕಿನ ವಿವಿಧಡೆ ವಲಸಿಗರು ಬಂದು ನೆಲೆಸಿದ್ದಾರೆ. ಇತ್ತೀಚೆಗೆ ಮೂಡಿಗೆರೆ ಸಂತೆಯಲ್ಲಿ ವಲಸಿಗರನ್ನು ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸು ದಾಖಲಿಸಿರುವ ಕುರಿತು ವಲಸಿಗರು ಹೆಚ್ಚಾಗುತ್ತಿದ್ದಂತೆ ಕಳ್ಳತನ, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುತ್ತಿದೆ  ಹಲವರ ತೋಟಗಳಲ್ಲಿ ಬಾಂಗ್ಲಾ ವಲಸಿಗರು ಕಾರ್ಮಿಕರಾಗಿ ನೆಲೆಸಿದ್ದಾರೆ.   ತಾಲೂಕಿನ ಬಿಳುಗುಳ, ಬಾಪು ನಗರ, ಛತ್ರ ಮೈದಾನ ಬಣಕಲ್ ನಲ್ಲಿ ಹೆಚ್ಚು ಬಾಡಿಗೆ ಸಿಗುವ ಆಸೆಗೆ ಹಲವು ಮನೆ ಮಾಲೀಕರು ತಮ್ಮ ಮನೆಗಳನ್ನು ವಲಸಿಗರಿಗೆ ಬಾಡಿಗೆ ನೀಡಿದ್ದಾರೆ  ಕೂಡಲೇ  ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸ್ಥಳಿಯ ಆಡಳಿತ ಕ್ರಮ ಕೈಗೊಳ್ಳಬೇಕು  ಎಂದರು.
ಸಭೆಯಲ್ಲಿ ವಿಧಾನಪರಿಷತು ಉಪ ಸಭಾಪತಿ  ಎಂ.ಕೆ. ಪ್ರಾಣೇಶ್ ಮಾತನಾಡಿ  ಕಾಫಿ ಬೆಳಗಾರರಿಗೆ ಕಾರ್ಮಿಕರ ಸಮಸ್ಯೆ ಇದೆ. ಆದರೆ ಕಡಿಮೆ ಕೂಲಿಗೆ ಸಿಗುತಾರೆಂದು  ಬಾಂಗ್ಲಾ ವಲಸಿಗರನ್ನು  ಕೆಲಸಕ್ಕೆ ಸೇರಿಸಿಕೊಂಡರೆ ಅಪಾಯ ತಪ್ಪಿದ್ದಲ್ಲ. ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ  ಅವರ ಸಂಪೂರ್ಣ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು  ಸ್ಥಳೀಯ ಪೊಲೀಸ್ ಠಾಣೆಗೆ ಅಸ್ಸಾಂ ಆಗಲಿ ಹೊರ ರಾಜ್ಯದಿಂದ ಬಂದ ಕಾರ್ಮಿಕರಿದ್ದರೆ ಮಾಹಿತಿ ನೀಡಬೇಕು. ಕಾಫಿ ಬೆಳೆಗಾರರು ಸೇರಿದಂತೆ, ಗಾರೆ ಕೆಲಸದ ಗುತ್ತಿಗೆದಾರರು  ಎಲ್ಲರೂ ಒಟ್ಟಾದರೆ ಮಾತ್ರ ವಲಸಿಗರನ್ನು ತಡೆಯಲು ಸಾಧ್ಯವಾಗುತ್ತದೆ. ತೋಟದ ಮಾಲೀಕರು ಹೊರ ರಾಜ್ಯದಿಂದ ಬಂದ  ಕಾರ್ಮಿಕರ ಮೇಲೆ ಕಣ್ಣಿಡಬೇಕು ಬಾಂಗ್ಲಾ ವಲಸಿಗರ ವಿಚಾರವಾಗಿ  ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಸೇರಿದಂತೆ  ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಮುಖ್ಯ ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ ಎಂದರು.
 ಹಂಡುಗುಳಿ ಪ್ರಶಾಂತ್ ಮಾತನಾಡಿ  ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತ  ಮೂಡಿಗೆರೆ ಪಟ್ಟಣ, ಬಣಕಲ್ ಇಂಟರ್ನೆಟ್ ಗಳಲ್ಲಿ   ನಕಲಿ ಆಧಾರ್ ಕಾರ್ಡ್  ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮಾತನಾಡುತ್ತಿದ್ದು  ಈ ಬಗ್ಗೆ ಕ್ರಮ ವಹಿಸಬೇಕು  ಹಾಗೂ ಬಾಡಿಗೆ ಮನೆ ನೀಡಿರುವ  ಮಾಲಿಕರಿಗಳಿಗೆ ನೋಟಿಸ್ ನೀಡಬೇಕು  ಎಲ್ಲೆಲ್ಲಿ ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಪತ್ತೆ ಹಚ್ಚಿ ಕ್ರಮ ಕೂಡಲೇ  ಕೈಗೊಳ್ಳಬೇಕು  ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ  ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.
 ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳು  ಮೂಡಿಗೆರೆ ಬಂದು ಸೇರಿದಂತೆ ವಿವಿಧ ಹೋರಾಟಕ್ಕೆ ಮುಂದಾಗಬೇಕು ಎಂದು  ಅಭಿಪ್ರಾಯಸಿದರು.
 ಸಭೆಯಲ್ಲಿ ಬೆಳಗಾರರ ಸಂಘದ ಮುಖಂಡರಾದ ಬಾಳೂರು ಬಾಲು, ಪತ್ರಕರ್ತರಾದ ಗೌಡಳ್ಳಿ ಪ್ರಸನ್ನ, ರಾಘವೇಂದ್ರ ಕೆಸವಳಲು, ಆಟೋ ಸಂಘದ ಅಧ್ಯಕ್ಷರಾದ  ನಾಗೇಶ್, ಕೆಂಪೇಗೌಡ ಸಂಘದ ಅಧ್ಯಕ್ಷರಾದ  ಬ್ರಿಜೇಶ್ ಕಡಿದಾಳ್, ಸವಿತಾ ಸಮಾಜದ  ಮಹೇಶ್, ಜೆಸಿಐ ಅಧ್ಯಕ್ಷರಾದ ಸುನಿಲ್, ರೈತ ಸಂಘದ ಮುಖಂಡರಾದ ದಯಾಕರ್, ಬೆಳಗಾರರಾದ  ಪ್ರಶಾಂತ್ ಬಿಳಗುಳ, ಟೈಲರ್ ಸಂಘದ ಮುಖಂಡರಾದ  ಹಲಸಿನಮರ ಶಿವಣ್ಣ, ಭಜರಂಗದಳ ತಾಲೂಕು ಸಂಚಾಲಕರಾದ ಸಂತೋಷ್, ಮುಂತಾದವರು ಉಪಸ್ಥಿತರಿದ್ದರು.